alex Certify
ಕನ್ನಡ ದುನಿಯಾ       Mobile App
       

Kannada Duniya

ಪಿಎಂ ಭೇಟಿ ನಂತ್ರ ಭಾವುಕರಾದ ಮೆಹಬೂಬ ಮುಫ್ತಿ

mehbooba-759

ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ದಿನದಿನಕ್ಕೂ ಹದಗೆಡುತ್ತಿರುವ ಕಾಶ್ಮೀರದ ಪರಿಸ್ಥಿತಿಯನ್ನು ಸುಧಾರಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಪಿಎಂ, ಕಾಶ್ಮೀರದ ಪರಿಸ್ಥಿತಿ ಬಗ್ಗೆ ಚಿಂತಿತರಾಗಿದ್ದಾರೆ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆಂದು ಸಭೆ ಬಳಿಕ ಮುಫ್ತಿ ಹೇಳಿದ್ದಾರೆ.

ಪ್ರಧಾನ ಮಂತ್ರಿ ಜೊತೆ ಮಾತುಕತೆ ನಡೆಸಿದ ನಂತ್ರ ಮಾಧ್ಯಮಗಳ ಜೊತೆ ಮಾತನಾಡಿದ ಮುಫ್ತಿ ಭಾವುಕರಾದ್ರು. ಪಾಕಿಸ್ತಾನಕ್ಕೆ ಮಾತುಕತೆಯಲ್ಲಿ ಆಸಕ್ತಿ ಇಲ್ಲ, ಅದು ರಕ್ತಪಾತ ಬಯಸುತ್ತಿದೆ ಎಂದ್ರು. ಪಾಕಿಸ್ತಾನ ಕಾಶ್ಮೀರದ ಶಾಂತಿಯನ್ನು ಕದಡಿದೆ. ಅಲ್ಲದೆ ಮಾತುಕತೆಗೆ ಬರದೆ ತಪ್ಪಿಸಿಕೊಳ್ತಾ ಇದೆ ಎಂದು ಸಿಎಂ ಆರೋಪಿಸಿದ್ರು.

ಸೆಪ್ಟೆಂಬರ್ ಮೊದಲ ವಾರದಲ್ಲಿ ಸಮಿತಿಯೊಂದನ್ನು ಕಾಶ್ಮೀರಕ್ಕೆ ಕಳುಹಿಸಲು ಸರ್ಕಾರ ಸಿದ್ಧತೆ ನಡೆದಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಎಲ್ಲ ಪಕ್ಷದ ಸದಸ್ಯರ ನಿಯೋಗವೊಂದು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲಿದೆ. ಹಾಗಾಗಿ ಇಂದು ನಡೆದ ಪ್ರಧಾನಿ ಹಾಗೂ ಮುಫ್ತಿ ಭೇಟಿ ಬಹಳ ಮಹತ್ವ ಪಡೆದಿದೆ.

ಮಾಹಿತಿಯೊಂದರ ಪ್ರಕಾರ ಜಮ್ಮು-ಕಾಶ್ಮೀರದಲ್ಲಿ ಶಾಂತಿ ಕದಡುವ 1 ಸಾವಿರ ಮಂದಿಯ ಪಟ್ಟಿಯನ್ನು ಸಿದ್ಧಪಡಿಸಿದೆ ಎನ್ನಲಾಗ್ತಾ ಇದೆ. ಪರಿಸ್ಥಿತಿಯನ್ನು ಹಾಳು ಮಾಡ್ತಿರುವ ಹುರಿಯತ್ ಹಾಗೂ ಇತರ 400 ನಾಯಕರ ವಿರುದ್ಧ ಸಾರ್ವಜನಿಕ ಸುರಕ್ಷತೆ ಕಾಯ್ದೆಯಡಿ ದೂರು ದಾಖಲಿಸಲು ಸರ್ಕಾರ ಚಿಂತನೆ ನಡೆಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...