alex Certify
ಕನ್ನಡ ದುನಿಯಾ       Mobile App
       

Kannada Duniya

ಗಮನ ಸೆಳೆದ ಇವಾಂಕ ಡ್ರೆಸ್ : ವಿಶೇಷ ಉಡುಗೊರೆ ನೀಡಿದ ಮೋದಿ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗಳು ಇವಾಂಕಾ ಟ್ರಂಪ್ ಹೈದ್ರಾಬಾದ್ ನಲ್ಲಿ ನಡೆದ ಜಾಗತಿಕ ಉದ್ಯಮಶೀಲತಾ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಮಂಗಳವಾರ ನಡೆದ ಶೃಂಗಸಭೆ ನಂತ್ರ ಮೋದಿ ಭೋಜನ ಕೂಟದಲ್ಲಿಯೂ ಇವಾಂಕಾ ಭಾಗಿಯಾಗಿದ್ದರು. ಈ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇವಾಂಕಾರಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.

ಶೃಂಗಸಭೆಯಲ್ಲಿ ಇವಾಂಕ ಧರಿಸಿದ್ದ ಡ್ರೆಸ್ ಚರ್ಚೆಗೆ ಕಾರಣವಾಗಿದೆ. ಹಸಿರು ಬಣ್ಣದ ಇವಾಂಕ ಡ್ರೆಸ್ ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗ್ತಿದೆ. ಕೆಲವರು ಇದ್ಯಾವ ಸ್ಟೈಲ್ ಎಂದು ಪ್ರಶ್ನೆ ಮಾಡಿದ್ದಾರೆ.

ರಾತ್ರಿ ಡಿನ್ನರ್ ವೇಳೆ ಇವಾಂಕ ಭಾರತದ ಡಿಸೈನರ್ ನೀತಾ ಲುಲ್ಲಾ ವಿನ್ಯಾಸಗೊಳಿಸಿರುವ ಗೌನ್ ಧರಿಸಿದ್ದರು. ಪ್ರಸಿದ್ಧ ವಾರಣಾಸಿ ನಗರದ ಸಿಲ್ಕ್ ದಾರ ಬಳಸಿ ಈ ಡ್ರೆಸ್ ವಿನ್ಯಾಸಗೊಳಿಸಲಾಗಿದೆ. ಇವಾಂಕ ಭೇಟಿ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉಡುಗೊರೆ ನೀಡಿದ್ದಾರೆ. ಸಿಡ್ಲಿ ಕ್ರ್ಯಾಫ್ಟ್ ಇರುವ ಮರದ ಬಾಕ್ಸ್ ಉಡುಗೊರೆ ನೀಡಿದ್ದು, ಗುಜರಾತಿನ ಸೂರತ್ ನಲ್ಲಿ ಇದು ಸಿದ್ಧವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...