alex Certify
ಕನ್ನಡ ದುನಿಯಾ       Mobile App
       

Kannada Duniya

ಹೈದ್ರಾಬಾದ್ ಗೆ ಬಂದಿಳಿದ ಇವಾಂಕ : ಸಂಜೆ ಮೋದಿ ಜೊತೆ ಭೋಜನ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗಳು ಹಾಗೂ ಸಲಹೆಗಾರರಾಗಿರುವ ಇವಾಂಕ ಟ್ರಂಪ್ ಭಾರತಕ್ಕೆ ಬಂದಿಳಿದಿದ್ದಾರೆ. ಇವಾಂಕ ಬೆಳಿಗ್ಗೆ 5 ಗಂಟೆಗೆ ಹೈದ್ರಾಬಾದ್ ಗೆ ಬಂದಿದ್ದಾರೆ. ಇವಾಂಕ ಹೈದ್ರಾಬಾದ್ ನಲ್ಲಿ ನಡೆಯಲಿರುವ ಗ್ಲೋಬಲ್ ಎಂಟರ್ಪ್ರೆನಿಯರ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಪಾಲ್ಗೊಳ್ಳಲಿದ್ದಾರೆ. ಇವಾಂಕಾರಿಗೆ ಮೋದಿ ಭೋಜನಕೂಟ ಏರ್ಪಡಿಸಿದ್ದಾರೆ. ಭಾರತಕ್ಕೆ ಬಂದಿಳಿದ ಇವಾಂಕ ಎರಡೂ ದೇಶ ಒಂದಾದ್ರೆ ಅನೇಕ ಕೆಲಸಗಳನ್ನು ಮಾಡಬಹುದು. ಒಂದಾಗಿ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸಬಹುದು ಎಂದಿದ್ದಾರೆ.

ಇವಾಂಕ ಹೈದ್ರಾಬಾದ್ ಗೆ ಬರ್ತಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಹೆಚ್ಚಿಸಲಾಗಿದೆ. ಇವಾಂಕ ಭದ್ರತೆಗಾಗಿ 2500 ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಗ್ಲೋಬಲ್ ಎಂಟರ್ಪ್ರೆನಿಯರ್ ಶೃಂಗಸಭೆಯಲ್ಲಿ ಸುಮಾರು 150 ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಇವ್ರ ಸುರಕ್ಷತೆಗಾಗಿ 10 ಸಾವಿರ ಭದ್ರತಾ ಸಿಬ್ಬಂದಿ ಸಿದ್ಧವಾಗಿ ನಿಂತಿದ್ದಾರೆ.

ಕಾರ್ಯಕ್ರಮದ ನಂತ್ರ ಇವಾಂಕ ಸುಮಾರು 20 ನಿಮಿಷಗಳ ಕಾಲ ಪ್ರಧಾನ ಮಂತ್ರಿ ಜೊತೆ ಮಾತುಕತೆ ನಡೆಸಲಿದ್ದಾರೆ. ಸಂಜೆ ಸುಮಾರು 4.45ರ ಸುಮಾರಿಗೆ ಶೃಂಗಸಭೆಯನ್ನುದ್ದೇಶಿಸಿ ಇವಾಂಕ ಮಾತನಾಡಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...