alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಕಾಂಡೊಮ್ ಕುರಿತಾದ ಒಂದು ಸುದ್ದಿ

condo-dd

ಭೋಪಾಲ್: ಗರ್ಭನಿರೋಧಕ ಸಾಧನ ಕಾಂಡೊಮ್ ಬಳಸಲು ಪುರುಷರು ಹಿಂದೇಟು ಹಾಕುತ್ತಿದ್ದು, ಅವರಿಗೆ ಅಗತ್ಯ ಮಾರ್ಗದರ್ಶನ ನೀಡಲು ಪುರುಷ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ.

ಮಧ್ಯಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ಮದುವೆಯಾದ ಹೆಣ್ಣುಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿ ಗರ್ಭಾಪಾತದ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಆಶಾ ಕಾರ್ಯಕರ್ತೆಯರು ಹೆಣ್ಣುಮಕ್ಕಳಿಗೆ ಮಾತ್ರ ಗರ್ಭ ನಿರೋಧಕ ಸಾಧನ ಬಳಸುವ ಮಾಹಿತಿ ನೀಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಹೆಚ್ಚಿನ ಪುರುಷರಿಗೆ ನಿರೋಧ್ ಬಳಸುವ ಬಗ್ಗೆ ಮಾಹಿತಿಯೇ ಇಲ್ಲವಾಗಿದೆ.

ಗರ್ಭಾಪಾತದ ಸಂಖ್ಯೆಯಲ್ಲಿ ಶೇ. 127 ರಷ್ಟು ಏರಿಕೆಯಾಗಿದ್ದರಿಂದ ಮಧ್ಯಪ್ರದೇಶ ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧ್ಯಯನ ನಡೆಸಿದಾಗ, ಪುರುಷರು ಕಾಂಡೊಮ್ ಸೇರಿದಂತೆ ಗರ್ಭ ನಿರೋಧಕ ಸಾಧನ ಬಳಸದಿರುವುದು ಗೊತ್ತಾಗಿದೆ.

ಈ ಹಿನ್ನಲೆಯಲ್ಲಿ ನವವಿವಾಹಿತರಿಗೆ ಕಾಂಡೊಮ್ ಗಳನ್ನು ನೀಡಿ ಬಳಸುವ ಕುರಿತಾಗಿ ಮಾರ್ಗದರ್ಶನ ನೀಡಲು ಪುರುಷ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...