alex Certify
ಕನ್ನಡ ದುನಿಯಾ       Mobile App
       

Kannada Duniya

ವಾಹನ ಸವಾರರು ಓದಲೇಬೇಕಾದ ಸುದ್ದಿಯಿದು

ನಗರದ ರಸ್ತೆಗಳಲ್ಲಿ ಕಾರುಗಳ ಗರಿಷ್ಠ ವೇಗದ ಮಿತಿಯನ್ನು 70 ಕಿಮೀಗೆ ಹೆಚ್ಚಿಸಲು ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ. ಕಾರ್ಗೋ ಕ್ಯಾರಿಯರ್ ಗಳ ವೇಗದ ಮಿತಿ 60 ಕಿಮೀ ಹಾಗೂ ದ್ವಿಚಕ್ರ ವಾಹನಗಳ ವೇಗದ ಮಿತಿಯನ್ನು 50 ಕಿಮೀಗೆ ನಿಗದಿಪಡಿಸಲಾಗಿದೆ.

ರಸ್ತೆ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಆಯಾ ರಾಜ್ಯ ಸರ್ಕಾರಗಳು ಇದರಲ್ಲಿ ಮಾರ್ಪಾಡು ಮಾಡಲು ಅವಕಾಶವಿದೆ. ಈವರೆಗೆ ರಾಷ್ಟ್ರೀಯ ಗರಿಷ್ಠ ವೇಗದ ಮಿತಿಯನ್ನು ರಸ್ತೆ ಸಾರಿಗೆ ಸಚಿವಾಲಯವೇ ನಿಗದಿ ಮಾಡುತ್ತಿತ್ತು.

ವೇಗದ ಮಿತಿ ಬದಲಾವಣೆ ಪ್ರಸ್ತಾಪವನ್ನು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅಂಗೀಕರಿಸಿದ್ದಾರೆ. ಎಕ್ಸ್ ಪ್ರೆಸ್ ವೇಗಗಳಲ್ಲಿ ಸಂಚರಿಸುವ ಬಸ್ ಗಳ ವೇಗದ ಮಿತಿಯನ್ನು ಸಹ ಹೆಚ್ಚಿಸಬೇಕೆಂದು ಸಾರಿಗೆ ಇಲಾಖೆಯ ಜಂಟಿ ಕಾರ್ಯದರ್ಶಿ ಅಭಯ್ ದಾಮ್ಲೆ ನೇತೃತ್ವದ ಸಮಿತಿ ಶಿಫಾರಸು ಮಾಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...