alex Certify
ಕನ್ನಡ ದುನಿಯಾ       Mobile App
       

Kannada Duniya

ಗಂಗಾ ನದಿಯಲ್ಲಿ ಮೂವರನ್ನು ರಕ್ಷಿಸಿದ ಯೋಧರು

river-ganga

ಶಿವಪುರಿ: ಗಂಗಾನದಿಯಲ್ಲಿ ಅಪಾಯಕ್ಕೆ ಸಿಲುಕಿದ ಮೂವರನ್ನು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐ.ಟಿ.ಬಿ.ಪಿ.) ಯೋಧರು ರಕ್ಷಿಸಿದ್ದಾರೆ.

ಉತ್ತರಾಖಂಡ್ ನ ಶಿವಪುರಿಯಲ್ಲಿ ಗಂಗಾ ನದಿಗೆ ಇಳಿದಿದ್ದ ಮೂವರು ಪ್ರವಾಸಿಗರು ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ. ಈ ವೇಳೆ ನದಿಯಲ್ಲಿ ಒಮ್ಮೆಲೆ ನೀರಿನ ಪ್ರವಾಹ ಹೆಚ್ಚಾಗಿದ್ದು, ಮೂವರು ನದಿಯ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದವರು ಸಹಾಯಕ್ಕಾಗಿ ಬೇಡಿಕೊಂಡಿದ್ದು, ದಡದಲ್ಲಿದ್ದವರು ಪ್ರವಾಸಿಗರ ರಕ್ಷಣೆಗೆ ಮೊರೆ ಇಟ್ಟಿದ್ದಾರೆ. ಇದೇ ವೇಳೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಯೋಧರು ನೆರವಿಗೆ ಧಾವಿಸಿದ್ದಾರೆ.

ಸುರಕ್ಷಾ ಸಾಧನಗಳೊಂದಿಗೆ ತೆರಳಿ ಗಂಗಾ ನದಿಯಲ್ಲಿ ಅಪಾಯಕ್ಕೆ ಸಿಲುಕಿದ್ದ ಮೂವರು ಪ್ರವಾಸಿಗರನ್ನು ರಕ್ಷಿಸಿದ್ದಾರೆ. ಈ ದೃಶ್ಯವನ್ನೆಲ್ಲಾ ದಡದ ಮೇಲಿದ್ದವರು ಸೆರೆ ಹಿಡಿದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...