alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಬಿಗ್ ಬಿ ಮನೆ ತೋರಿಸುವುದಾಗಿ ಹೇಳಿದವನು ಮಾಡಿದ್ದೇನು ಗೊತ್ತಾ?

ಮುಂಬೈನ ಜುಹು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣವೊಂದು ದಾಖಲಾಗಿದೆ. 37 ವರ್ಷದ ಇಟಲಿ ಮಹಿಳೆಯೊಬ್ಬರು ವ್ಯಕ್ತಿಯೊಬ್ಬ ಕ್ಯಾಬ್ನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಅಂತ ದೂರು ನೀಡಿದ್ದಾರೆ. ಜೂನ್ 14 ರಂದು ಈ ಘಟನೆ ನಡೆದದ್ದು, ಇತ್ತೀಚೆಗಷ್ಟೇ ಸಂತ್ರಸ್ಥ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಸ್ ಒಂದರಲ್ಲಿ ಪರಿಚಯವಾದ ವ್ಯಕ್ತಿ ತನ್ನನ್ನ ಇಟಲಿ ಮಹಿಳೆಗೆ ಪರಿಚಯಿಸಿಕೊಂಡಿದ್ದು ತಾನೊಬ್ಬ ಪ್ರವಾಸಿ ಗೈಡ್ ಅಂತ. ಜುಹುನಲ್ಲಿ ಇಬ್ಬರ ಬಸ್ ಪ್ರಯಾಣ ಮುಗಿದ ಬಳಿಕ ಆತ ಮಹಿಳೆಗೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ಬಂಗಲೆಯನ್ನ ತೋರಿಸೋದಾಗಿ ಹೇಳಿದ್ದ. ನಂತರ ಆಕೆಯನ್ನ ಕೋಲ್ಬಾ ಹೊಟೇಲ್ಗೆ ಡ್ರಾಪ್ ಮಾಡ್ತೀನಿ ಅಂತ ಹೇಳಿ ಕ್ಯಾಬ್ನಲ್ಲಿ ಕರೆದುಕೊಂಡು ಹೋಗಿದ್ದ.

ಅತನೇ ಕ್ಯಾಬ್ ಒಂದನ್ನ ಬುಕ್ ಮಾಡಿ ಆಲ್ಕೋ ಹಾಲ್ ಸೇವಿಸುವಂತೆ ಆಕೆಗೆ ಬಲವಂತ ಮಾಡಿ ಆನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಅಂತ ಮಹಿಳೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...