alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ವಿಮಾನ ನಿಲ್ದಾಣದ ಒಳಗೂ ಬಂತು ಮಳೆ

ದಕ್ಷಿಣ ಭಾರತವನ್ನು ಕಾಡಿದ ರಣಭೀಕರ ಮಳೆ ಈಗ ಉತ್ತರ ಪ್ರದೇಶಕ್ಕೆ ಶಿಫ್ಟ್ ಆಗಿದೆ. ಗುವಾಹಟಿಯ ಲೋಕಪ್ರಿಯ ಗೋಪಿನಾಥ್ ಬೋರ್ಡೋಲಿಯೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ನಿರೀಕ್ಷಣಾ ಕೊಠಡಿಯ ಮಾಳಿಗೆಯನ್ನೇ ಸೀಳಿ ಮಳೆಯ ನೀರು ಹರಿದಿದೆ.

ಇದರಿಂದಾಗಿ ವಿಮಾನಕ್ಕೆ ಕಾಯುತ್ತಿದ್ದ ಅನೇಕ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಸೋಮವಾರ ರಾತ್ರಿ 8.45ರಿಂದ 10ಗಂಟೆಯವರೆಗೂ ಮಳೆಯ ನೀರು ಹರಿದು ತುಂಬಾನೇ ಸಮಸ್ಯೆ ಉಂಟಾಗಿದೆ. ಅದೃಷ್ಟವಶಾತ್ ನೀರು ಹರಿದ ಪರಿಣಾಮ ಯಾವುದೇ ವಿದ್ಯುತ್ ಅವಘಡ ಸಂಭವಿಸದಂತೆ ಸಿಬ್ಬಂದಿ ಎಚ್ಚರ ವಹಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದ ವಿಡಿಯೋ ಒಂದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಮಾನ ನಿಲ್ದಾಣದ ಎಸಿ ಮತ್ತು ಸೀಲಿಂಗ್ ಸ್ಥಳದ ಮೂಲಕ ಮಳೆ ನೀರು ರಭಸವಾಗಿ ಸುರಿದ ಪರಿಣಾಮ ವಿಮಾನ ನಿಲ್ದಾಣದ ಕಾರ್ಯ ಚಟುವಟಿಕೆಗಳಿಗೂ ಕೆಲ ಕಾಲ ತೊಂದರೆ ಉಂಟಾಗಿತ್ತು. ತಮ್ಮ ಲಗೇಜ್ನೊಂದಿಗೆ ನಿರೀಕ್ಷಣಾ ಕೊಠಡಿಯಲ್ಲಿದ್ದ ಪ್ರಯಾಣಿಕರು ಕೂಡಲೇ ಬೇರೆ ಸ್ಥಳಗಳಿಗೆ ಶಿಫ್ಟ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ನೋಡಿದ ಮಂದಿ ಘಟನೆಗೆ ನಾನಾ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...