alex Certify
ಕನ್ನಡ ದುನಿಯಾ       Mobile App
       

Kannada Duniya

ಜೊತೆಗಿರಬೇಕಾಗಿಲ್ಲ ಡ್ರೈವಿಂಗ್ ಲೈಸೆನ್ಸ್

ravi-shankar-prasad-story_650_033114090135_052614115655_060314051935

ವಾಹನ ಚಾಲಕರಿಗೊಂದು ಖುಷಿ ಸುದ್ದಿ. ಇನ್ಮುಂದೆ ಡ್ರೈವಿಂಗ್ ಲೈಸೆನ್ಸ್ ಹಾಗೂ ಆರ್ಸಿ ಬುಕ್ ಇಲ್ಲದೆಯೇ ನೀವು ಗಾಡಿ ಚಲಾಯಿಸಬಹುದು. ಇದಕ್ಕೆ ನೀವು ಮಾಡಬೇಕಾಗಿದ್ದಿಷ್ಟೆ, ದಾಖಲೆಗಳನ್ನು ಡಿಜಿಟಲ್ ಲಾಕರ್ ನಲ್ಲಿ ಇಡಬೇಕು.

ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ನಿನ್ನೆ ಡಿಜಿಟಲ್ ಲಾಕರ್ ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ. ಈ ಡಿಜಿಟಲ್ ಲಾಕರ್ ಆರಂಭವಾದ ಮೇಲೆ ವಾಹನ ಚಾಲಕರ ಕೆಲಸ ಸುಲಭವಾಗಲಿದೆ. ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಯಾವುದೇ ದಾಖಲೆಗಳನ್ನು ಜೊತೆಯಲ್ಲಿ ಕೊಂಡೊಯ್ಯುವ ಅಗತ್ಯವಿರುವುದಿಲ್ಲ.

http://digitallocker.gov.in ನಲ್ಲಿ ದಾಖಲೆಗಳನ್ನು ಸುರಕ್ಷಿತವಾಗಿಡಬಹುದಾಗಿದೆ. http://digitallocker.gov.in ವೆಬ್ ಸೈಟ್ ನಲ್ಲಿ ಮೊದಲು ದಾಖಲೆಗಳನ್ನು ಅಪ್ ಲೋಡ್ ಮಾಡಬೇಕಾಗುತ್ತದೆ. ನಂತ್ರ ಸಂಚಾರಿ ಪೊಲೀಸ್ ಹಾಗೂ ವಾಹನ ಸವಾರರ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು. ಅಪ್ಲಿಕೇಷನ್ ಓಪನ್ ಮಾಡಿದ್ರೆ ವಾಹನ ಚಾಲಕನ ಎಲ್ಲ ದಾಖಲೆಗಳು ಅಲ್ಲಿಯೇ ಸಿಗಲಿವೆ. ಇದಕ್ಕೆ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಫೋನ್ ನಂಬರ್ ಅವಶ್ಯಕತೆ ಇರುತ್ತದೆ.

ಡಿಜಿಟಲ್ ಲಾಕರ್ ನಲ್ಲಿ ಡ್ರೈವಿಂಗ್ ಲೈಸೆನ್ಸ್ ನಿಂದ ಹಿಡಿದು ಪ್ಯಾನ್ ಕಾರ್ಡ್, ಪಾಸ್ಪೋರ್ಟ್, ಪದವಿ ಸೇರಿದಂತೆ ಎಲ್ಲ ಶೈಕ್ಷಣಿಕ ದಾಖಲೆ ಪತ್ರಗಳನ್ನು ಸುರಕ್ಷಿತವಾಗಿಡಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...