alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮತ್ತೊಂದು ದಾಖಲೆ

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮತ್ತೊಂದು ದಾಖಲೆಗೆ ಪಾತ್ರವಾಗಿದೆ. 100 ನೇ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿದೆ.

ಈಗಾಗಲೇ ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವಾರು ದಾಖಲೆಗಳನ್ನು ಬರೆದಿರುವ ಇಸ್ರೋ ಶುಕ್ರವಾರ ಒಂದೇ ಸಲಕ್ಕೆ 31 ಉಪಗ್ರಹಗಳನ್ನು ವಿವಿಧ ಕಕ್ಷೆಗಳಿಗೆ ಹಾರಿಸಿದೆ.

ಕಾರ್ಟೊಸ್ಯಾಟ್ -2 ಸೇರಿ ಭಾರತದ 3 ಉಪಗ್ರಹಗಳು, ವಿದೇಶದ 28 ಉಪಗ್ರಹಗಳನ್ನು ಹೊತ್ತ 1323 ಕೆ.ಜಿ. ತೂಕದ ಪಿ.ಎಸ್.ಎಲ್.ವಿ. –ಸಿ 40 ರಾಕೆಟ್ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ನಭಕ್ಕೆ ಚಿಮ್ಮಿದೆ.

ಭಾರತದ 3, ದಕ್ಷಿಣ ಕೊರಿಯಾ, ಫಿನ್ ಲ್ಯಾಂಡ್, ಅಮೆರಿಕ, ಬ್ರಿಟನ್, ಕೆನಡಾದ 28 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲು ಇಸ್ರೋ ವಿಜ್ಞಾನಿಗಳು ಮುಂದಾಗಿದ್ದಾರೆ.

ಕಾರ್ಟೊಸ್ಯಾಟ್ -2 ಭೂ ಪರಿವೀಕ್ಷಣೆಯ ಉಪಗ್ರಹವಾಗಿದ್ದು, ನಗರ ಯೋಜನೆ ರಚನೆಯ ಮಾಹಿತಿ, ರಸ್ತೆ ಸಂಪರ್ಕ ವ್ಯವಸ್ಥೆಗಳ ಮೇಲೆ ನಿಗಾ, ಭೂ ಬಳಕೆಯ ಬದಲಾವಣೆ ಗುರುತಿಸುವುದು ಮೊದಲಾದ ಉದ್ದೇಶಗಳ ಮಾಹಿತಿಯನ್ನು ಒದಗಿಸಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...