alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಇಸ್ರೋ ವಿಜ್ಞಾನಿಗಳ ವಿಡಿಯೋ

isro-ff

ನವದೆಹಲಿ: ಭಾರತ 71 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದೆ. ಈ ಸಂಭ್ರಮಕ್ಕೆ ಪೂರಕವಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಯುವ ವಿಜ್ಞಾನಿಗಳ ತಂಡದಿಂದ ‘I am an Indian’ ಮ್ಯೂಸಿಕ್ ವಿಡಿಯೋ ಬಿಡಗಡೆ ಮಾಡಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಇಸ್ರೋ ವಿಜ್ಞಾನಿಗಳ ಈ ಮ್ಯೂಸಿಕ್ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಇತಿಹಾಸ ನಿರ್ಮಿಸಲಿರುವ ಚಂದ್ರಯಾನ -2 ಯೋಜನೆಗೆ ಬೆಂಬಲ ಸೂಚಿಸಲಾಗಿದೆ.

ಹಿಂಸೆಯನ್ನು ದೂರ ಮಾಡಿ ಶಾಂತಿಯನ್ನು ನೆಲೆಸುವ, ಹೊಸ ಕನಸುಗಳೊಂದಿಗೆ ನವ ಭಾರತವನ್ನು ನಿರ್ಮಾಣ ಮಾಡುವ ಆಶಯಗಳನ್ನು ಇದು ಒಳಗೊಂಡಿದೆ.

ಜಿ.ಎಸ್.ಎಲ್.ವಿ. ಮಾರ್ಕ್ -3 ರಾಕೆಟ್ ನಿರ್ಮಾಣದಲ್ಲಿ ತೊಡಗಿಕೊಂಡಿದ್ದ ಏರೋ ಸ್ಪೇಸ್ ಇಂಜಿನಿಯರ್ ಶಿಜು ಜಿ. ಥಾಮಸ್ ಅವರು ಸಾಹಿತ್ಯ, ಸಂಗೀತ ನೀಡಿದ್ದಾರೆ.

ತಂಡದ ಸದಸ್ಯರು ಹಣ ಹಾಕಿದ್ದಾರೆ. 18 ತಿಂಗಳ ಕಾಲ ಶ್ರಮವಹಿಸಿ ಇದನ್ನು ನಿರ್ಮಿಸಿದ್ದು, ಅರಬ್ಬೀ ಸಮುದ್ರ ತೀರದಲ್ಲಿ ಚಿತ್ರೀಕರಣ ಮಾಡಲಾಗಿದೆ.

ಸ್ಪೇಸ್ ಇಂಜಿನಿಯರ್ಸ್ ಅಸೋಸಿಯೇಷನ್ ತಂಡದ ಬೆಂಬಲದೊಂದಿಗೆ ಮೂಡಿ ಬಂದಿರುವ ‘I am an Indian’ ಮ್ಯೂಸಿಕ್ ವಿಡಿಯೋ ಎಲ್ಲರ ಗಮನ ಸೆಳೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...