alex Certify
ಕನ್ನಡ ದುನಿಯಾ       Mobile App
       

Kannada Duniya

ಕಳೆದ ಮೂರು ವರ್ಷಗಳಲ್ಲಿ ಇಸ್ರೋ ಗಳಿಸಿದ್ದೆಷ್ಟು…?

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ಕಳೆದ ಮೂರು ವರ್ಷಗಳಲ್ಲಿ ತಾನು ಗಳಿಸಿದ ಆದಾಯದ ವಿವರಗಳನ್ನ ಬಹಿರಂಗಪಡಿಸಿದೆ. ಏಪ್ರಿಲ್ 2015 ರಿಂದ ಮಾರ್ಚ್ 2018 ರವರೆಗೆ ಇಸ್ರೊದ ವಾಣಿಜ್ಯೋದ್ಯಮ ಪ್ರಾಧಿಕಾರ ನಿಗಮ ನಿಯಮಿತ ಸಂಸ್ಥೆಯ ಅಡಿಯಲ್ಲಿ ಬರೋಬ್ಬರಿ 5600 ಕೋಟಿ ರೂಪಾಯಿಗಳನ್ನ ಗಳಿಸಿದೆ.

ಮಾರುಕಟ್ಟೆ ಮತ್ತು ಸೇವಾ ಉತ್ಪನ್ನಗಳು, ಖಾಸಗಿ ವಲಯದ ಗ್ರಾಹಕರ ಸ್ಯಾಟಲೈಟ್ ಲಾಂಚ್, ಹಾಗು ಇತರೆ ದೇಶಗಳ ಉಪಗ್ರಹ ಉಡಾವಣೆಗಳಿಂದಾಗಿ ಮೂರು ಹಣಕಾಸು ವರ್ಷಗಳಲ್ಲಿ 5600 ಕೋಟಿ ರೂಪಾಯಿ ಗಳಿಸಿದೆ. ಇದರಲ್ಲಿ 1932 ಕೋಟಿ ರೂಪಾಯಿಗಳನ್ನ 2017-18ರ ಹಣಕಾಸು ವರ್ಷದಲ್ಲಿ ಇಸ್ರೊ ಗಳಿಸಿದೆ. 1872 ಕೋಟಿ ರೂಪಾಯಿಗಳನ್ನ 216-17ರ ಆರ್ಥಿಕ ವರ್ಷದಲ್ಲಿ ಕಲೆ ಹಾಕಿದೆ.

ಇದೇ ಸಮಯದಲ್ಲಿ ಇಸ್ರೋ 7209 ಕೋಟಿ ರೂಪಾಯಿಗಳನ್ನ ತನ್ನ ಬಾಹ್ಯಾಕಾಶ ಯಾನ ವ್ಯವಸ್ಥೆಯ ಹಲವು ಕಾರ್ಯಕ್ರಮಗಳಿಗಾಗಿ ಖರ್ಚು ಮಾಡಿದೆ. ವಿದೇಶಿ ಉಪಗ್ರಹ ಉಡಾವಣೆಗಳಿಂದ ಮೂರು ವರ್ಷದಲ್ಲಿ ಇಸ್ರೊ ಗಳಿಸಿರುವ ಅದಾಯದ ಸರಾಸರಿ ಶೇಕಡಾ 10 ರಿಂದ ಶೇಕಡಾ 20 ರ ಒಳಗಿದೆ. ಶೇಕಡಾ 75 ಕ್ಕೂ ಹೆಚ್ಚು ಆದಾಯ ಬಂದಿರೋದು ಖಾಸಗಿ ದೂರಸಂಪರ್ಕ ಕ್ಷೇತ್ರದ ವ್ಯವಹಾರದಿಂದ.

ಪ್ರಸ್ತುತ ಇಸ್ರೋದ ಬಳಿ ರಿಲಯನ್ಸ್, ಸನ್ ನೆಟ್ವರ್ಕ್ ಸೇರಿದಂತೆ 84 ಅತಿ ದೊಡ್ಡ ಗ್ರಾಹಕರಿದ್ದು, ಮೂರು ವರ್ಷಗಳಲ್ಲಿ ಇಸ್ರೋ ಲಾಂಚ್ ಮಾಡಿರುವ 99 ಉಪಗ್ರಹಗಳ ಪೈಕಿ 69 ವಿದೇಶಿ ಸಂಸ್ಥೆಗಳಿಗೆ ಸೇರಿದ್ದಾಗಿದೆ. ಇದರಲ್ಲಿ ವಿದ್ಯಾರ್ಥಿಗಳ ಪ್ರಾಯೋಗಿಕ ಪರೀಕ್ಷಾ ಉಪಗ್ರಹಗಳು ಸೇರಿವೆ. ಇದೇ ಸೆಪ್ಟೆಂಬರ್ ನಲ್ಲಿ ಇಸ್ರೋದ ಪಿಎಸ್ಎಲ್ವಿ ಉಪಗ್ರಹವನ್ನ ಭೂ ಕಕ್ಷೆ ಸೇರಿಸೋದಕ್ಕೆ ಅಂತಿಮ ತಯಾರಿಗಳು ನಡೆದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...