alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ಈ ಹಳ್ಳಿಯಲ್ಲಿ ಭಾರತೀಯರಿಗೇ ಪ್ರವೇಶ ನಿಷಿದ್ಧ

tourist drugಹಿಮಾಚಲದ ಕಸೋಲ್ ಹಳ್ಳಿ ಇಸ್ರೇಲ್ ಪ್ರವಾಸಿಗರ ನೆಚ್ಚಿನ ತಾಣ. ಇಲ್ಲಿ ಎಷ್ಟು ಮಂದಿ ಇಸ್ರೇಲಿಯನ್ನರು ಇದ್ದಾರೆಂದರೆ ಅದು ಇಸ್ರೇಲ್ ನದೇ ಯಾವುದೋ ಹಳ್ಳಿಯಿರಬೇಕು ಎನಿಸುತ್ತದೆ. ಇನ್ನೊಂದು ಆಶ್ವರ್ಯದ ಸಂಗತಿ ಎಂದರೆ ಅಲ್ಲಿ ಭಾರತೀಯ ಹುಡುಗರಿಗೆ ಪ್ರವೇಶ ನಿಷಿದ್ಧ.

ಅಲ್ಲಿ ಹೋಗುವ ಭಾರತೀಯರು ಇಸ್ರೇಲಿ ಮಹಿಳೆಯರನ್ನು ಚುಡಾಯಿಸುತ್ತಾರಂತೆ. ಭಾರತೀಯರು ಅಲ್ಲಿಗೆ ಬರುವುದರಿಂದ ಇಸ್ರೇಲಿ ಜನರ ಮೋಜು, ಮಸ್ತಿಗೆ ಧಕ್ಕೆ ಉಂಟಾಗುತ್ತದೆಯಂತೆ. ಹಾಗಾಗಿ ಅಲ್ಲಿ ಭಾರತೀಯರಿಗೆ ಪ್ರವೇಶವಿಲ್ಲ. ಹಾಗೊಮ್ಮೆ ಯಾರಾದರೂ ಭಾರತೀಯರು ಅಲ್ಲಿ ಹೋದರೆ ಇಸ್ರೇಲಿಯನ್ನರು ಅವರಿಗೆ ತಂಗಲು ಯಾವುದೇ ಜಾಗ ಕೊಡುವುದಿಲ್ಲ.

ಕಸೋಲ್ ಹಳ್ಳಿಯಲ್ಲಿ ಈಗ ಎಲ್ಲಿ ನೋಡಿದರೂ ಇಸ್ರೇಲ್ ಧ್ವಜಗಳೇ ಕಾಣಿಸುತ್ತವೆ. ಅಲ್ಲಿ ದಿನಂಪ್ರತಿ ಡ್ರಗ್ಸ್, ಗಾಂಜಾ ಮುಂತಾದವು ಸಿಗುವುದರಿಂದ ಅನೇಕರು ಇದಕ್ಕೆ ಬಲಿಯಾಗುತ್ತಿದ್ದಾರೆ. ಮೊದಮೊದಲು ಬಾಡಿಗೆಗೆಂದು ಬಂದ ಇಸ್ರೇಲಿ ಜನರು ನಂತರ ತಮ್ಮದೇ ಆದ ಕೆಫೆ, ಗೆಸ್ಟ್ ಹೌಸ್ ಎಲ್ಲವನ್ನೂ ಮಾಡಿಕೊಂಡಿದ್ದಾರೆ. ಮೊದಲು ಈ ಊರಿನವರ ಬಳಿ ಸ್ವಂತ ಗಾಡಿಯೂ ಇರಲಿಲ್ಲ. ಈಗ ಕೆಲವರು ತಮ್ಮದೇ ಆದ ಗೆಸ್ಟ್ ಹೌಸ್, ಕೆಫೆಗಳನ್ನು ನಡೆಸುತ್ತಾರೆ. ಈ ಎಲ್ಲ ಬೆಳವಣಿಗೆಗಳು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...