alex Certify
ಕನ್ನಡ ದುನಿಯಾ       Mobile App
       

Kannada Duniya

ತಾಜ್ ಮಹಲ್ ನಲ್ಲಿ ಪತ್ನಿ ಜೊತೆ ಅಮೂಲ್ಯ ಸಮಯ ಕಳೆದ ಬೆಂಜಮಿನ್

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು 6 ದಿನಗಳ ಭಾರತದ ಪ್ರವಾಸದಲ್ಲಿದ್ದಾರೆ. ಬೆಂಜಮಿನ್ ಇಂದು ಪತ್ನಿ ಸಾರಾ ಜೊತೆ ತಾಜ್ ಮಹಲ್ ಗೆ ಭೇಟಿ ನೀಡಿದ್ದರು.

ಬೆಳಿಗ್ಗೆ ದೆಹಲಿಯಿಂದ ಪತ್ನಿ ಸಾರಾ ಜೊತೆ ಆಗ್ರಾಕ್ಕೆ ಹೋಗ್ತಿದ್ದಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿಮಾನ ನಿಲ್ದಾಣದಲ್ಲಿ ದಂಪತಿಗೆ ಸ್ವಾಗತ ಕೋರಿದ್ರು. ನಂತ್ರ ಅಮರ್ ವಿಲಾಸ್ ಹೊಟೇಲ್ ಗೆ ಭೇಟಿ ನೀಡಿದ ಬೆಂಜಮಿನ್ ದಂಪತಿಗೆ ಮತ್ತೊಮ್ಮೆ ಯೋಗಿ ಸ್ವಾಗತ ಕೋರಿದ್ರು.

ಬೆಂಜಮಿನ್ ತಾಜ್ ಮಹಲ್ ಭೇಟಿ ಖಾಸಗಿಯಾಗಿತ್ತು. ಹಾಗಾಗಿ ದಂಪತಿ ಜೊತೆ ಸಿಎಂ ಯೋಗಿ ತಾಜ್ ಮಹಲ್ ಗೆ ಭೇಟಿ ನೀಡಲಿಲ್ಲ. ತಾಜ್ ಮಹಲ್ ವೀಕ್ಷಣೆ ಮಾಡಲು ಉತ್ಸುಕರಾಗಿದ್ದ ಬೆಂಜಮಿನ್ ಹಾಗೂ ಸಾರಾ ಕೆಲ ಸಮಯವನ್ನುಇಬ್ಬರೆ ಕಳೆದ್ರು.

ಸುಮಾರು 45 ನಿಮಿಷಗಳ ಕಾಲ ತಾಜ್ ಮಹಲ್ ವೀಕ್ಷಣೆ ಮಾಡಿದ ಜೋಡಿ ಫೋಟೋ ಕ್ಲಿಕ್ಕಿಸಿಕೊಂಡರು. ಡಯಾನಾ ಬೆಂಚಿನ ಮೇಲೆ ಕುಳಿತು ಮಾತನಾಡಿದ್ರು. ತಾಜ್ ಮಹಲ್ ಭೇಟಿ ವೇಳೆ ಸಾರಾ ಕೆಂಪು ಡ್ರೆಸ್ ಧರಿಸಿದ್ದು ವಿಶೇಷವಾಗಿತ್ತು.  ಇಸ್ರೇಲ್ ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಸಾಮಾನ್ಯ ಪ್ರವಾಸಿಗರ ತಾಜ್ ಮಹಲ್ ಭೇಟಿಯನ್ನು ರದ್ದು ಮಾಡಲಾಗಿತ್ತು. ತಾಜ್ ಮಹಲ್ ವೀಕ್ಷಣೆ ಮಾಡಿದ ಬಳಿಕ ಬೆಂಜಮಿನ್ ಹಾಗೂ ಸಾರಾ ಯೋಗಿ ಆದಿತ್ಯನಾಥ್ ಜೊತೆ ಊಟ ಮಾಡಿದ್ರು. ಸುಮಾರು ಮಧ್ಯಾಹ್ನ 3 ಗಂಟೆ ವೇಳೆಗೆ ದಂಪತಿ ದೆಹಲಿಗೆ ವಾಪಸ್ ಆಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...