alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಧಾನಿ ಯೋಗದ ಬಗ್ಗೆ ಬೆಂಜಮಿನ್ ಹೇಳಿದ್ದೇನು?

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹಾಗೂ ಪ್ರಧಾನಿ ನರೇಂದ್ರ ಮೋದಿ ಸ್ನೇಹದ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಮೋದಿ ಹಿಂದಿನ ವರ್ಷ ಇಸ್ರೇಲ್ ಗೆ ಹೋಗಿದ್ದ ವೇಳೆ ಅವರಿಬ್ಬರ ಆಪ್ತತೆ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. ಈಗ ಬೆಂಜಮಿನ್ ಭಾರತಕ್ಕೆ ಬಂದಿದ್ದಾರೆ.

ಆಜ್ ತಕ್ ಜೊತೆ ಪ್ರವಾಸದ ಮೊದಲ ದಿನ ಭಾನುವಾರ ಮಾತನಾಡಿದ ಬೆಂಜಮಿನ್, ಜೆರುಸ್ಲೇಮ್ ಹಾಗೂ ಪಾಕಿಸ್ತಾನದ ಭಯೋತ್ಪಾದನೆ ಬಗ್ಗೆ ಮಾತನಾಡಿದ್ರು, ಜೊತೆಗೆ ಮೋದಿ ಯೋಗದ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗೆ ಆಸಕ್ತಿದಾಯಕವಾಗಿ ಬೆಂಜಮಿನ್ ಉತ್ತರ ನೀಡಿದ್ದಾರೆ.

ನೀವು ಯೋಗ ಮಾಡ್ತೀರಾ ಎಂದು ಬೆಂಜಮಿನ್ ಗೆ ಪ್ರಶ್ನೆ ಕೇಳಲಾಗಿದೆ. ನಾನು ಯೋಗ ಮಾಡೋದಿಲ್ಲ. ಬೆಳಿಗ್ಗೆ ಎದ್ದ ತಕ್ಷಣ ಬಲ ಭಾಗಕ್ಕೆ ನೋಡ್ತೇನೆ. ನಂತ್ರ ಪೂರ್ವ ಭಾಗಕ್ಕೆ ನೋಡ್ತಿದ್ದಂತೆ ನನಗೆ ಪ್ರಜಾಪ್ರಭುತ್ವ ರಾಷ್ಟ್ರ ಭಾರತ ಕಾಣಿಸುತ್ತದೆ. ಮೋದಿ ಎದ್ದ ತಕ್ಷಣ ಬಹುಷ್ಯಃ ತಮ್ಮ ಎಡಕ್ಕೆ ನೋಡುತ್ತಾರೆ. ಅವರಿಗೆ ಪ್ರಜಾಪ್ರಭುತ್ವ ರಾಷ್ಟ್ರ ಇಸ್ರೇಲ್ ಕಾಣಿಸುತ್ತದೆ ಎಂದಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವನ್ನು ಹೊಗಳಿದ ಬೆಂಜಮಿನ್ ಭಾರತವನ್ನು ನನ್ನ ಸ್ನೇಹಿತನಂತೆ ನೋಡುತ್ತೇನೆ ಎಂದಿದ್ದಾರೆ, ಎರಡೂ ದೇಶ, ನಾಗರಿಕರು ಹಾಗೂ ನಾಯಕರ ನಡುವೆ ಉತ್ತಮ ಸಂಬಂಧಿವಿದೆ ಎಂದು ಬೆಂಜಮಿನ್ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...