alex Certify
ಕನ್ನಡ ದುನಿಯಾ       Mobile App
       

Kannada Duniya

ದೇವಾಲಯ ಸ್ಫೋಟಿಸಲು ಸಜ್ಜಾಗಿದ್ದ ಶಂಕಿತ ಐಸಿಸ್ ಉಗ್ರರ ಸೆರೆ

574700-wasim-ramodiya

ಗುಜರಾತ್ ನ ದೇವಾಲಯವೊಂದನ್ನು ಸ್ಫೋಟಿಸಲು ಸಂಚು ರೂಪಿಸಿದ್ದ ಇಬ್ಬರು ಶಂಕಿತ ಭಯೋತ್ಪಾದಕರನ್ನು ಗುಜರಾತ್ ನ ಎಟಿಎಸ್ ಅಧಿಕಾರಿಗಳು ಬಂಧಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಆ ಸಹೋದರರು ಗುಜರಾತ್ ನ ಸುರೇಂದ್ರ ನಗರ್ ಜಿಲ್ಲೆಯ ಚೋಟಿಲಾ ಪರ್ವತದ ಮೇಲಿರುವ ಚಾಮುಂಡಾ ದೇವಸ್ಥಾನವನ್ನು ಸ್ಟೋಟಿಸಲು ಸ್ಕೆಚ್ ಹಾಕಿದ್ರು.

ಈ ಹಿಂದೆ ಎರಡು ಬಾರಿ ಕೂಡ ಭಯೋತ್ಪಾದಕ ದಾಳಿ ನಡೆಸಲು ಇವರು ವಿಫಲ ಯತ್ನ ನಡೆಸಿದ್ದರು. ವಸೀಂ ರಮೋದಿಯಾ ಹಾಗೂ ನಯೀಮ್ ರಮೋದಿಯಾ ಬಂಧಿತರು, ಇಬ್ಬರೂ ಬಿಸಿಎ ಹಾಗೂ ಎಂಸಿಎ ಪದವಿ ಪಡೆದ ಸುಶಿಕ್ಷಿತರು. ಚಾಮುಂಡಾ ದೇವಾಲಯಕ್ಕೆ ಪ್ರತಿದಿನ ಸಾವಿರಾರು ಭಕ್ತರು ಬರ್ತಾರೆ, ಹಾಗಾಗಿ ಅಲ್ಲಿ ವಿಧ್ವಂಸಕ ಕೃತ್ಯ ನಡೆಸುವುದು ಇವರ ಉದ್ದೇಶವಾಗಿತ್ತು.

ಬಂಧಿತರ ಬಳಿಯಿಂದ ಗನ್ ಪೌಡರ್, ಫೇಸ್ ಮಾಸ್ಕ್, ಬಾಂಬ್ ತಯಾರಿಕೆಗೆ ಬಳಸುವ ಬ್ಯಾಟರಿ, ಐಸಿಸ್ ಗೆ ಸೇರಿದ ಪತ್ರಿಕೆ ‘Dabik’, ಮೊಬೈಲ್, ಲ್ಯಾಪ್ ಟಾಪ್ ಸೇರಿದಂತೆ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಒಂದೂವರೆ ವರ್ಷಗಳಿಂದ ಇವರು ಟ್ವಿಟ್ಟರ್ ಮತ್ತು ಫೇಸ್ ಬುಕ್ ಸಹಾಯದಿಂದ ಐಸಿಸ್ ಜೊತೆಗೆ ಸಂಪರ್ಕದಲ್ಲಿದ್ದರು. ಐಸಿಸ್ ಸೂಚನೆ ಮೇರೆಗೆ ದುಷ್ಕೃತ್ಯಕ್ಕೆ ಹೊಂಚು ಹಾಕಿದ್ದರು ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...