alex Certify
ಕನ್ನಡ ದುನಿಯಾ       Mobile App
       

Kannada Duniya

ವಾರಣಾಸಿಯಲ್ಲಿ ಐಸಿಸ್ ಬೆದರಿಕೆ ಕರಪತ್ರ ಪತ್ತೆ

isis

ಉತ್ತರಪ್ರದೇಶದ ಪೂರ್ವಭಾಗವನ್ನು ಧ್ವಂಸ ಮಾಡುವುದಾಗಿ ಐಸಿಸ್ ಬೆದರಿಕೆ ಹಾಕಿದೆ. ಪಾಕಿಸ್ತಾನದಿಂದ ಬಂದಿರುವ ಐಎಸ್ಐಎಸ್ ಕರಪತ್ರಗಳು ವಾರಣಾಸಿಯಲ್ಲಿ ಸಿಕ್ಕಿವೆ. ಉತ್ತರಪ್ರದೇಶದ ಪೂರ್ವಭಾಗದಲ್ಲಿ ವಿಧ್ವಂಸಕ ಕೃತ್ಯ ನಡೆಸೋದಾಗಿ ಬೆದರಿಕೆ ಹಾಕಿದ್ದು, ಭದ್ರತೆ ಹೆಚ್ಚಿಸಲಾಗಿದೆ.

ಇಂತಹ ಐದಾರು ಕರಪತ್ರಗಳು ದೊರೆತಿವೆ, ಅವುಗಳಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತಾ ಬರೆಯಲಾಗಿದೆ. ಐಎಸ್ಐಎಸ್ ಇನಿಶಿಯಲ್ ಜೊತೆಗೆ ಪೂರ್ವಾಂಚಲದಲ್ಲಿ ದಾಳಿ ನಡೆಸೋದಾಗಿ ಎಚ್ಚರಿಕೆಯ ಬರಹಗಳಿವೆ. ನಾಳೆ ಪೂರ್ವಾಂಚಲದಲ್ಲಿ ವಿಧ್ವಂಸಕ ಕೃತ್ಯ ನಡೆಸುತ್ತೇವೆ, ಸಾಧ್ಯವಾದ್ರೆ ಬಚಾವ್ ಮಾಡಿಕೊಳ್ಳಿ ಅಂತಾ ಕರಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶದಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಗುಪ್ತಚರ ಇಲಾಖೆ ಈ ಬಗ್ಗೆ ತನಿಖೆ ನಡೆಸ್ತಾ ಇದೆ. ಯಾರೋ ಕಿಡಿಗೇಡಿಗಳು ಇದನ್ನ ಬರೆದು ಎಸೆದಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ಕೆಲ ದಿನಗಳ ಹಿಂದಷ್ಟೆ ಆಗ್ರಾದ ತಾಜ್ ಮಹಲ್ ಮೇಲೆ ದಾಳಿ ನಡೆಸೋದಾಗಿ ಬೆದರಿಕೆ ಹಾಕಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...