alex Certify
ಕನ್ನಡ ದುನಿಯಾ       Mobile App
       

Kannada Duniya

ಆತ್ಮಾಹುತಿ ದಾಳಿಗೆ ಆನ್ ಲೈನ್ ನಲ್ಲಿ ನೀಡಲಾಗ್ತಿದೆಯಂತೆ ತರಬೇತಿ

isis21-768x400

ಐಸಿಸ್ ಉಗ್ರರು ಭಾರತದಲ್ಲಿ ತಮ್ಮ ಅಸ್ತಿತ್ವ ಸ್ಥಾಪಿಸಲು ಮುಂದಾಗುತ್ತಿದ್ದಾರೆ ಎಂಬ ಆತಂಕದ ಬೆನ್ನಲ್ಲಿಯೇ ಆತ್ಮಾಹುತಿ ಬಾಂಬರ್‌ ಗಳಾಗುವುದು ಹೇಗೆ ಎಂಬ ಕುರಿತಾಗಿ ಐಸಿಸ್‌ ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕರ್‌ ಅಲ್‌ ಬಗ್ಧಾದಿ ಆನ್‌ ಲೈನ್‌ ಮೂಲಕವೇ ಮುಂಬೈ ಯುವಕರಿಗೆ ತರಬೇತಿ ನೀಡುತ್ತಿದ್ದಾನೆ ಎಂಬ ಆಘಾತಕಾರಿ ಅಂಶ ಬಯಲಿಗೆ ಬಂದಿದೆ.

ಹೌದು. ದೇಶದ 6 ನಗರಗಳಲ್ಲಿ ಬಂಧನಕ್ಕೆ ಒಳಗಾದ 14 ಶಂಕಿತ ಉಗ್ರರನ್ನು ಮುಂಬೈನ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಶಂಕಿತ ಉಗ್ರರು ಈ ಕುರಿತಾಗಿ ಬಾಯ್ಬಿಟ್ಟಿದ್ದು, ಬಗ್ಧಾದಿ ಹಾಗೂ ಆತನ ಸಹಚರರು ಸ್ಕೈಪ್‌ ಮತ್ತು ಇನ್ನಿತರೆ ವಿಡಿಯೋ ಕಾಲಿಂಗ್‌ ಸಾಫ್ಟ್ ವೇರ್‌ಗಳನ್ನು ಬಳಸಿ ಮುಂಬೈ ಹಾಗೂ ದೇಶದ ಇನ್ನಿತರೆಡೆಯ ಯುವಕರಿಗೆ ಆತ್ಮಾಹುತಿ ಬಾಂಬರ್‌ ಗಳಾಗುವುದು ಹೇಗೆ ಎಂಬುದನ್ನು ಬೋಧಿಸುತ್ತಿದ್ದಾರೆ ಎಂಬ ಸತ್ಯವನ್ನು ಹೊರ ಹಾಕಿದ್ದಾರೆ ಎನ್ನಲಾಗಿದೆ.

ಇನ್ನೂ ಆಘಾತಕಾರಿ ಅಂಶವೆಂದರೆ ಈ ಉಗ್ರ ತರಗತಿಗಳಿಗೆ ಯುವತಿಯರೂ ಹಾಜರಾಗುತ್ತಿದ್ದು, ಈಗಾಗಲೇ ಹಲವು ಯುವತಿಯರು ಸಾಕಷ್ಟು ತರಬೇತಿಯನ್ನೂ ಸಹ ಪಡೆದಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...