alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಪೋಟಕ ಮಾಹಿತಿ ಬಾಯ್ಬಿಟ್ಟ ಡೇವಿಡ್ ಹೆಡ್ಲಿ

ishrat-headley_6

ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ನಡೆದಿದ್ದ ಇಶ್ರತ್ ಜಹಾನ್ ಎನ್ ಕೌಂಟರ್ ಪ್ರಕರಣ ಕುರಿತಂತೆ ಭಯೋತ್ಪಾದಕ ಡೇವಿಡ್ ಹೆಡ್ಲಿ ಸ್ಪೋಟಕ ಮಾಹಿತಿ ನೀಡಿದ್ದಾನೆ.

ಸದ್ಯ ಅಮೆರಿಕಾ ಜೈಲಿನಲ್ಲಿರುವ ಹೆಡ್ಲಿ ಅಲ್ಲಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಂಬೈ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದು, ಇಶ್ರತ್ ಜಹಾನ್, ಲಷ್ಕರ್ ಇ ತಯ್ಯೆಬಾದ ಆತ್ಮಾಹುತಿ ಬಾಂಬರ್ ಆಗಿದ್ದಳು ಎಂಬ ಮಾಹಿತಿ ಹೊರ ಹಾಕಿದ್ದಾನೆ.

ಮಹಾರಾಷ್ಟ್ರದ ಮುಂಬ್ರಾ ಮೂಲದ ಇಶ್ರತ್ ಜಹಾನ್ ಮತ್ತಾಕೆಯ ಜೊತೆಗಿದ್ದ ಮೂವರನ್ನು 2004 ರ ಜೂನ್ 15 ರಂದು ಗುಜರಾತ್ ಪೊಲೀಸರು ಅಹಮದ್ ನಗರದಲ್ಲಿ ಎನ್ ಕೌಂಟರ್ ಮಾಡಿ ಹತ್ಯೆ ಮಾಡಿದ್ದರು. ಇದೊಂದು ನಕಲಿ ಎನ್ ಕೌಂಟರ್ ಎಂದು ಆರೋಪಿಸಿದ್ದ ಕಾಂಗ್ರೆಸ್, ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಇದಕ್ಕೆ ಹೊಣೆಗಾರರೆಂದು ಹೇಳಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...