alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಬಾನಿ ಪುತ್ರಿಯ ಬ್ಯೂಟಿ ಸೀಕ್ರೆಟ್ ಬಹಿರಂಗ…!

ಮುಖೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಎಂಗೇಜ್ಮೆಂಟ್ ಪಾರ್ಟಿಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಿಗಿಂತ ಹೆಚ್ಚು ಎಲ್ಲರ ಗಮನ ಸೆಳೆದಿದ್ದು ಇಶಾ ಅಂಬಾನಿ. ಎಂಗೇಜ್ಮೆಂಟ್ ಪಾರ್ಟಿಯಲ್ಲಿ ಆಕಾಶ್ ಸೋದರಿಯನ್ನ ನೋಡಿದವರೆಲ್ಲಾ ಆಕೆಯ ಸೌಂದರ್ಯಕ್ಕೆ ಮಾರು ಹೋಗಿದ್ದರು. ನಳನಳಿಸುವ ಗಂಧರ್ವ ಕನ್ಯೆಯಂತೆ ಕಾಣಿಸ್ತಿದ್ದ ಇಶಾ ಸೌಂದರ್ಯದ ಗುಟ್ಟೇನು ಅನ್ನೋದೇ ಎಲ್ಲರಿಗೂ ಪ್ರಶ್ನೆಯಾಗಿತ್ತು.

ಈಗ ಆ ಕುತೂಹಲಗಳಿಗೆಲ್ಲಾ ಉತ್ತರ ದೊರಕಿದೆ. ಇಶಾ ಅಂಬಾನಿಯ ಸೌಂದರ್ಯಕ್ಕೆ ಮಾಂತ್ರಿಕ ಸ್ಪರ್ಶ ನೀಡಿದ ಮೇಕಪ್ ಕಲಾವಿದನ ಹೆಸರು ವರ್ಧನ್ ನಾಯಕ್. ವರ್ಧನ್ ನಾಯಕ್ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅವರನ್ನು ಚಂದನದ ಗೊಂಬೆಯ ಹಾಗೆ ಕಾಣುವಂತೆ ಮಾಡುತ್ತಿರುವ ಮೇಕಪ್ ಕಲಾವಿದ ಕೂಡ.

ಲುಕ್ಸ್ ಹೇಗಿರಬೇಕು ಅನ್ನೋದ್ರ ಬಗ್ಗೆ ಮೊದಲು ಇಶಾರ ಅಭಿಪ್ರಾಯ ಕೇಳಿದ ವರ್ಧನ್ ನಾಯಕ್ ಅವರನ್ನ ಆದಷ್ಟು ನ್ಯಾಚುರಲ್ ಆಗಿ ಶೈನ್ ಆಗುವಂತೆ ಕಾಣಿಸಿಕೊಳ್ಳೋಕೆ ಸೂಚಿಸಿದರಂತೆ. ಆ ಪ್ರಕಾರ ಕಣ್ಣು, ಮುಖ, ತುಟಿ, ಹೇರ್ ಸ್ಟೈಲ್ ನಲ್ಲಿ ಹೆಚ್ಚೇನು ಪ್ರಯೋಗಗಳನ್ನ ಮಾಡೋಕೆ ಹೋಗಲಿಲ್ಲವಂತೆ. ಸಹಜ ಸೌಂದರ್ಯವನ್ನೇ ಫೋಕಸ್ ಮಾಡಿದ್ದರ ಪರಿಣಾಮವೇ ಇಶಾ ಪಾರ್ಟಿಯಲ್ಲಿ ಹೆಚ್ಚು ಕಂಗೊಳಿಸಿದರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...