alex Certify
ಕನ್ನಡ ದುನಿಯಾ       Mobile App
       

Kannada Duniya

ನೀತಾ, ಇಶಾ ಅಂಬಾನಿ ನೋಡಲು ಮುಗಿಬಿದ್ರು ಜನ

ಇಶಾ ಅಂಬಾನಿ ನಿಶ್ಚಿತಾರ್ಥ ಇಟಲಿಯಲ್ಲಿ ಅದ್ಧೂರಿಯಾಗಿ ನಡೆದಿದೆ. ಮೂರು ದಿನಗಳ ಕಾಲ ನಡೆದ ಸಮಾರಂಭದಲ್ಲಿ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಸಮಾರಂಭದ ಕೆಲ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹಾಗೆ ಅದ್ಧೂರಿ ನಿಶ್ಚಿತಾರ್ಥದ ಸುದ್ದಿ ಇನ್ನೂ ಸದ್ದು ಮಾಡ್ತಿದೆ.

ಈ ಮಧ್ಯೆ ನೀತಾ ಅಂಬಾನಿ ಹಾಗೂ ಮಗಳು ಇಶಾ ಅಂಬಾನಿ ವಿಡಿಯೋ ಒಂದು ಎಲ್ಲರ ಗಮನ ಸೆಳೆದಿದೆ. ನೀತಾ ಅಂಬಾನಿ ಮಗಳ ಜೊತೆ ಲೇಕ್ ಕೊಮೊದ ಚರ್ಚ್ ಒಂದಕ್ಕೆ ಭೇಟಿ ನೀಡಿದ್ದಾರೆ. ನೀತಾ ಫ್ಯಾನ್ಸ್ ಇನ್ಸ್ಟ್ರಾಗ್ರಾಮ್ ಅಕೌಂಟ್ ನಲ್ಲಿ ಈ ವಿಡಿಯೋವನ್ನು ಹಾಕಲಾಗಿದೆ.

ಮೊದಲು ನೀತಾ ಅಂಬಾನಿ ಭದ್ರತಾ ಪಡೆ ಜೊತೆ ಒಳಗೆ ಹೋಗ್ತಾರೆ. ನಂತ್ರ ಇಶಾ ಅಂಬಾನಿ ಹಾಗೂ ಶ್ಲೋಕಾ ಮೆಹ್ತಾ ಚರ್ಚ್ ಒಳಗೆ ಹೋಗ್ತಾರೆ. ಪಾಶ್ಚಾತ್ಯ ಉಡುಪಿನಲ್ಲಿ ಎಲ್ಲರೂ ಸುಂದರವಾಗಿ ಕಾಣ್ತಿದ್ದಾರೆ. ಒನ್ ಪೀಸ್ ಡ್ರೆಸ್ ನಲ್ಲಿ ನೀತಾ ಅಂಬಾನಿ ಎಲ್ಲರ ಗಮನ ಸೆಳೆದಿದ್ದಾರೆ.

ನೀತಾ ಅಂಬಾನಿ ಹಾಗೂ ಮಕ್ಕಳನ್ನು ನೋಡಲು ಸ್ಥಳೀಯರು ಮುಗಿ ಬಿದ್ದಿದ್ದರು. ಚರ್ಚ್ ಒಳಗೆ ಅಂಬಾನಿ ಕುಟುಂಬ ಹೋಗ್ತಿದ್ದಂತೆ ಜನರು ಅವ್ರನ್ನು ಬಿಟ್ಟಕಣ್ಣು ಬಿಟ್ಟಂತೆ ನೋಡ್ತಿದ್ದರು. ಕೆಲವರು ಮೊಬೈಲ್ ನಲ್ಲಿ ನೀತಾ, ಇಶಾ ಫೋಟೋವನ್ನು ಸೆರೆ ಹಿಡಿದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...