alex Certify
ಕನ್ನಡ ದುನಿಯಾ       Mobile App
       

Kannada Duniya

ಇಶಾ ಅಂಬಾನಿ-ಆನಂದ್ ಪಿರಾಮಲ್ ಲವ್ ಸ್ಟೋರಿ

ಈ ವರ್ಷದ ಕೊನೆಯಲ್ಲಿ ಶ್ರೀಮಂತ ಕುಟುಂಬದ ಮದುವೆಯೊಂದು ಎಲ್ಲರ ಗಮನ ಸೆಳೆಯಲಿದೆ. ಮುಖೇಶ್ ಅಂಬಾನಿ ಮಗಳು ಇಶಾ ಅಂಬಾನಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ಇಟಲಿಯಲ್ಲಿ ಎಂಗೇಜ್ಮೆಂಟ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಮದುವೆ ಡಿಸೆಂಬರ್ ನಲ್ಲಿ ನಿಗದಿಯಾಗಿದೆ.

ಇಶಾ ಅಂಬಾನಿ, ಅಜಯ್ ಪಿರಾಮಲ್ ಮಗ ಆನಂದ್ ಪಿರಾಮಲ್ ರಿಗೆ ಉಂಗುರ ತೊಡಿಸಲಿದ್ದಾರೆ. ಅಂಬಾನಿ ಹಾಗೂ ಪಿರಾಮಲ್ ಕುಟುಂಬದ ಮಧ್ಯೆ ಅನೇಕ ವರ್ಷಗಳಿಂದ ಸ್ನೇಹ ಸಂಬಂಧವಿದೆ. 90ರ ದಶಕದಲ್ಲಿ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ, ಅಜಯ್-ಸ್ವಾತಿ ಪಿರಾಮಲ್ ಜೊತೆ ಅಂಟಾರ್ಟಿಕಾ ಪ್ರವಾಸಕ್ಕೆ ತೆರಳಿದ್ದರು.

ಎರಡೂ ಕುಟುಂಬದ ಮಧ್ಯೆ ಆಪ್ತತೆಯಿದೆ. ಇಶಾ ಹಾಗೂ ಆನಂದ್ ಕೂಡ ಉತ್ತಮ ಸ್ನೇಹಿತರು. ಸ್ನೇಹ ನಿಧಾನವಾಗಿ ಪ್ರೇಮಕ್ಕೆ ತಿರುಗಿದೆ. ಆನಂದ್ ತಮ್ಮ ಪ್ರೀತಿಯನ್ನು ಇಶಾ ಮುಂದಿಟ್ಟಿದ್ದಾರೆ. ಸ್ನೇಹಿತನನ್ನು ಬಾಳ ಸಂಗಾತಿ ಮಾಡಿಕೊಳ್ಳಲು ಇಶಾ ಒಪ್ಪಿಗೆ ನೀಡಿದ್ದಾರೆ. ಆನಂದ್ ಮಹಾಬಲೇಶ್ವರ ದೇವಸ್ಥಾನದಲ್ಲಿ ಇಶಾರಿಗೆ ಪ್ರೇಮನಿವೇದನೆ ಮಾಡಿದ್ದರಂತೆ.

ಮೊಣಕಾಲೂರಿ ಇಶಾ ಕೈ ಹಿಡಿದು ಆನಂದ್ ಪ್ರೇಮ ನಿವೇದನೆ ಮಾಡ್ತಿದ್ದಂತೆ ಖುಷಿಯಲ್ಲಿ ತೇಲಿ ಹೋಗಿದ್ದರು ಇಶಾ. ಇದ್ರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಗಳ ಆಯ್ಕೆಗೆ ಅಂಬಾನಿ ಕುಟುಂಬ ಯಸ್ ಎಂದಿದೆ. ಇಬ್ಬರ ನಿಶ್ಚಿತಾರ್ಥಕ್ಕೆ ಸಿದ್ಧತೆ ನಡೆದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...