alex Certify
ಕನ್ನಡ ದುನಿಯಾ       Mobile App
       

Kannada Duniya

ಎಚ್ಚರ: ನಿಮ್ಮ ಮೊಬೈಲ್ ಸೆಟ್ ಕೂಡ ನಕಲಿಯಾಗಿರಬಹುದು…!?

ವಡೋದರ: ಸ್ಥಳೀಯ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಆನ್ ಲೈನ್ ಮೂಲಕ ನಡೆಯುತ್ತಿದ್ದ ನಕಲಿ ಮೊಬೈಲ್ ಮಾರಾಟ ಜಾಲ ಪತ್ತೆಹಚ್ಚಿದ್ದಾರೆ. ಅಷ್ಟೇ ಅಲ್ಲದೇ 24 ಲಕ್ಷ ರೂ. ಮೌಲ್ಯದ ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಆನ್ ಲೈನ್ ಮೂಲಕ ದೇಶಾದ್ಯಂತ ಗ್ರಾಹಕರಿಗೆ ಮೊಬೈಲ್ ಪೂರೈಸುತ್ತಿದ್ದ ಆರೋಪಿಗಳು ನಕಲಿ ಮೊಬೈಲ್ ಘಟಕ ಹೊಂದಿದ್ದರೆಂಬುದು ತನಿಖೆ ವೇಳೆ ಗೊತ್ತಾಗಿದೆ. ಇದೀಗ ಒಬ್ಬ ಆರೋಪಿಯನ್ನು ಬಂಧಿಸಿದ್ದು, ತನಿಖೆ ಚುರುಕಾಗಿ ಸಾಗಿದೆ.

ಆನ್ ಲೈನ್ ಮೊಬೈಲ್ ಖರೀದಿಯ ಬಗ್ಗೆ ಅನೇಕ ದೂರುಗಳು ಬಂದಿದ್ದು, ಈ ಪ್ರಕರಣದಲ್ಲಿ ಕಾಪಿರೈಟ್ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಈ ನಕಲಿ ಮೊಬೈಲ್ ರಾಕೆಟ್ ಜಾಲವು 50 ಸಾವಿರ ರೂ. ಬೆಲೆಗಿಂತ ಹೆಚ್ಚಿನ ದರದ ಐಫೋನ್ ಎಕ್ಸ್, ಸ್ಯಾಮ್‌ಸಂಗ್ ಗೆಲಾಕ್ಸಿ ಸರಣಿಯಂಥ ಉನ್ನತ ಶ್ರೇಣಿಯ ಮೊಬೈಲ್ ಗಳನ್ನು ರೂಪಾಂತರಿಸುತ್ತಿತ್ತು ಎನ್ನಲಾಗಿದೆ.

ಇದೇ ವೇಳೆ ನಿಮ್ಮ ಮೊಬೈನ್ ಅಸಲಿಯೋ, ನಕಲಿಯೋ ಎಂದು ತಿಳಿದುಕೊಳ್ಳಲು ಐಎಂಇಐ ಸಂಖ್ಯೆಯನ್ನು ಪಡೆದುಕೊಂಡು ಮೊಬೈಲ್ ಕಂಪೆನಿಯ ವೆಬ್ ಸೈಟ್ ನಲ್ಲಿ ಪರಿಶೀಲಿಸಿ ಎಂದು ಪೊಲೀಸರು, ಬಳಕೆದಾರರಿಗೆ ಸಲಹೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...