alex Certify
ಕನ್ನಡ ದುನಿಯಾ       Mobile App
       

Kannada Duniya

ಇದು ನಟ ಅಮೀರ್ ಖಾನ್ ಅವರ ಫೇವರಿಟ್ ಫೋನಾ…?

ವಿವೋ ಸಂಸ್ಥೆ ತನ್ನ ವಿವೋ ವಿ11 ಪ್ರೋ ಹ್ಯಾಂಡ್ ಸೆಟ್ ನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಬಾಲಿವುಡ್ ತಾರೆ ಅಮೀರ್ ಖಾನ್ ಅವರು, ಹೊಸ ಶ್ರೇಣಿಯ ಮೊಬೈಲ್ ಬಿಡುಗಡೆ ಮಾಡಿರುವ ಫೋಟೊವನ್ನು ವಿವೊ ಪ್ರದರ್ಶಿಸಿದೆ.

ನೂತನ ಶ್ರೇಣಿಯ ಮೊಬೈಲ್ ನಲ್ಲಿ ರಿಯರ್ ಕ್ಯಾಮೆರಾಗೆ 24 ಹಾಗೂ 12 ಮೆಗಾ ಫಿಕ್ಸಲ್ ನ ಡುಯ್ಯಲ್ ಕ್ಯಾಮೆರಾ ಹಾಗೂ 25 ಮೆಗಾಫಿಕ್ಸಲ್ ನ ಫ್ರಂಟ್ ಕ್ಯಾಮೆರಾವನ್ನು‌ ಅಳವಡಿಸಿದೆ. ಇನ್ನು ಮಧ್ಯಮ ಶ್ರೇಣಿ ಮೌಲ್ಯದ ಮೊಬೈಲ್ ಫೋನ್ ನಲ್ಲಿ ಇದೇ ಮೊದಲ ಬಾರಿಗೆ ಫುಲ್ ಸ್ಕ್ರೀನ್ ಡಿಸ್ ಪ್ಲೇ ಹಾಗೂ ಸ್ಕ್ರೀನ್ ನಲ್ಲಿಯೇ ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ನು ಪರಿಚಯಿಸಿದೆ.

ಮಧ್ಯಮ ಶ್ರೇಣಿಯ ಮೊಬೈಲ್ ಗಳಲ್ಲಿ ಸ್ಕ್ರೀನ್ ನಲ್ಲಿಯೇ ಫಿಂಗರ್ ಪ್ರಿಂಟ್ ಸೆನ್ಸಾರ್ ಅಳವಡಿಸಿರುವುದು ಇದೇ ಮೊದಲ ಬಾರಿಗೆ ಎಂದು ಸಂಸ್ಥೆ ಹೇಳಿಕೊಂಡಿದೆ. 3400 ಎಂಎಎಚ್ ಬ್ಯಾಟರಿ, ಆರು ಜಿಬಿ ರ್ಯಾಂ, 64 ಜಿಬಿ ಇಂಟರ್ನಲ್ ಮೆಮೊರಿ ಹಾಗೂ 256 ಜಿಬಿ ಮೆಮೋರಿ ಕಾರ್ಡ್ ಅಳವಡಿಸಲು ಅವಕಾಶವಿದೆ. ಇನ್ನುಳಿದಂತೆ ಸ್ನಾಪ್ ಡ್ರಾಗನ್ 660 ಚಿಪ್ ಅಳವಡಿಸಲಾಗಿದೆ. ಹೈ ಎಂಡ್ ಮೊಬೈಲ್ ನಲ್ಲಿರುವ ಬಹುತೇಕ ತಂತ್ರಾಂಶವನ್ನು ಅಳವಡಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...