alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ವಿಡಿಯೋ ಕಾಲ್ ವಿಚಾರಣೆಗೆ ಸುಪ್ರೀಂ ಕೋರ್ಟ್ ತರಾಟೆ

ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ವಿಚಾರಣೆ ಕೇಳಿದ್ದೇವೆ. ಆದರೆ ವಾಟ್ಸಾಪ್ ಮುಖಾಂತರ ವಿಚಾರಣೆ ಎಂದಾದರೂ ಕೇಳಿದ್ದೀರಾ? ಹೀಗೊಂದು ಘಟನೆ ನಿಜವಾಗಿಯೂ ನಡೆದಿದ್ದು, ವಿಷಯ ತಿಳಿದು ಸುಪ್ರೀಂ ಕೋರ್ಟ್ ಅಸಮಾಧಾನಗೊಂಡಿರುವುದು ಮಾತ್ರವಲ್ಲ, ಕೋರ್ಟ್ ಕಲಾಪವೆಂದರೆ ಜೋಕ್ ಅಂತ ತಿಳಿದಿದ್ದೀರೇನು ಎಂದು ತರಾಟೆಗೆ ತೆಗೆದುಕೊಂಡಿದೆ.

ಭಾರತೀಯ ನ್ಯಾಯಾಂಗ ವ್ಯವಸ್ಥೆಯನ್ನು ಅಣಕಿಸುವಂತಹ ಘಟನೆ ನಡೆದಿರುವುದು ಜಾರ್ಖಂಡ್ ನ ಹಝರಿಬಾಗ್ ನ ಸ್ಥಳೀಯ ನ್ಯಾಯಾಲಯದಲ್ಲಿ. ಗಲಭೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಅಲ್ಲಿನ ಮಾಜಿ ಸಚಿವ ಯೋಗೇಂದ್ರ ಸಾಹು ಮತ್ತು ನಿರ್ಮಲಾ ದೇವಿ ಅವರ ವಿಚಾರಣೆ ನಡೆಸಬೇಕಾಗಿತ್ತು.

ಆದರೆ ಉನ್ನತ ಕೋರ್ಟ್ ನಿಂದ ಜಾಮೀನು ಮೇಲಿದ್ದ ಅವರಿಬ್ಬರು ಮಧ್ಯಪ್ರದೇಶದ ಭೋಪಾಲ್ ಬಿಟ್ಟು ಹೊರ ಹೋಗುವಂತಿರಲಿಲ್ಲ. ಈ ವಿಷಯವವನ್ನು ಅವರು ಜಾರ್ಖಂಡ್ ಕೋರ್ಟ್ ಗೆ ಮನವರಿಕೆ ಮಾಡಿಕೊಟ್ಟು ಏ.19 ರಂದು ವಾಟ್ಸಾಪ್ ವಿಡಿಯೋ ಕಾಲ್ ನಲ್ಲಿ ವಿಚಾರಣೆ ಎದುರಿಸಿದ್ದಾರೆ. ಈ ಬೆಳವಣಿಗೆಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಕೆಂಡಾಮಂಡಲರಾಗಿದ್ದು, ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...