alex Certify
ಕನ್ನಡ ದುನಿಯಾ       Mobile App
       

Kannada Duniya

ಚೀನಾದಲ್ಲಿ ಮುದ್ರಣವಾಗ್ತಿದೆಯಾ ಭಾರತದ ನೋಟು?

ಭಾರತದ ನೋಟು ಚೀನಾದಲ್ಲಿ ಮುದ್ರಣವಾಗ್ತಿದೆಯಾ? ಚೀನಾ ಮಾಧ್ಯಮಗಳು ಈ ಅನುಮಾನ ಮೂಡುವಂತಹ ವರದಿ ಮಾಡ್ತಿವೆ. ಕಾಂಗ್ರೆಸ್ ನಾಯಕ ಶಶಿ ತರೂರ್ ಕೂಡ ಕೇಂದ್ರ ಸರ್ಕಾರದಿಂದ ವಿವರಣೆ ಕೇಳಿದ್ದಾರೆ. ಇದನ್ನು ಸರ್ಕಾರ ನಿರಾಕರಿಸಿದೆ. ಚೀನಾ ಮಾಧ್ಯಮಗಳಲ್ಲಿ ಬಂದ ವರದಿ ಸತ್ಯಕ್ಕೆ ದೂರವಾದದ್ದು ಎಂದು ಕೇಂದ್ರ ಸರ್ಕಾರ ಹೇಳಿದೆ.

ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್, ಭಾರತ, ನೇಪಾಳ, ಬಾಂಗ್ಲಾದೇಶ, ಮಲೇಷ್ಯಾ, ಥೈಲ್ಯಾಂಡ್ ಸೇರಿದಂತೆ ಕೆಲ ದೇಶಗಳ ನೋಟುಗಳು ಚೀನಾ ಪ್ರೆಸ್ ನಲ್ಲಿ ಮುದ್ರಣವಾಗ್ತಿದೆ ಎಂದು ವರದಿ ಮಾಡಿತ್ತು. ಬ್ಯಾಂಕ್ ನೋಟ್ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೋರೇಶನ್ ಅಧ್ಯಕ್ಷೆ ಲಿಯು ಗುಸೆಂಗ್ ಮೇ. 1ರಂದು ನೀಡಿದ್ದ ಸಂದರ್ಶನವನ್ನು ಚೀನಾ ಮಾರ್ನಿಂಗ್ ಪೋಸ್ಟ್ ಉಲ್ಲೇಖ ಮಾಡಿತ್ತು.

ಸಂದರ್ಶನದಲ್ಲಿ ಲಿಯು, 2013ರಿಂದ ವಿದೇಶಿ ನೋಟುಗಳು ಇಲ್ಲಿ ಮುದ್ರಣವಾಗ್ತಿವೆ ಎಂದಿದ್ದರು. ಭಾರತ, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ಮಲೇಷ್ಯಾ, ಥೈಲ್ಯಾಂಡ್, ಬ್ರೆಜಿಲ್, ಪೋಲೆಂಡ್ ಸೇರಿದಂತೆ ಅನೇಕ ದೇಶಗಳ ನೋಟು ನಮ್ಮ ದೇಶದಲ್ಲಿ ಮುದ್ರಣವಾಗ್ತಿದೆ ಎಂದಿದ್ದರು.

ಸೋಮವಾರ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ, ಹಣಕಾಸು ಸಚಿವಾಲಯ ಈ ವಿಷಯದ ಬಗ್ಗೆ ಸ್ಪಷ್ಟೀಕರಣ ನೀಡಿದೆ. ಚೀನಾದ ಯಾವುದೇ ಪ್ರೆಸ್ ನಲ್ಲಿ ಭಾರತದ ನೋಟುಗಳ ಮುದ್ರಣವಾಗ್ತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಪ್ರಸಾರವಾಗ್ತಿರುವ ಎಲ್ಲ ವರದಿ ಸುಳ್ಳೆಂದು ಹೇಳಿದೆ. ಭಾರತದ ನೋಟುಗಳು ಕೇವಲ ಕೇಂದ್ರ ಸರ್ಕಾರ ಹಾಗೂ ಆರ್ಬಿಐ ಮುದ್ರಣ ಪ್ರೆಸ್ ನಲ್ಲಿ ಮಾತ್ರ ಮುದ್ರಣವಾಗ್ತಿದೆ ಎಂದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...