alex Certify
ಕನ್ನಡ ದುನಿಯಾ       Mobile App
       

Kannada Duniya

ಸೊಸೆಗಾದ ರಕ್ತಸ್ರಾವ ನೋಡಿ ಪ್ರಜ್ಞೆತಪ್ಪಿ ಬಿದ್ದ ಅತ್ತೆ

ಅಮೃತಸರದ ಹೋಶಿಯರ್ಪುರ್ ನ ಸಿವಿಲ್ ಆಸ್ಪತ್ರೆ ನಿರ್ಲಕ್ಷ್ಯವೊಂದು ಬಹಿರಂಗವಾಗಿದೆ. ಲವ್ದೀಪ್ ಪತ್ನಿ ಹೆರಿಗೆಗೆಂದು ಬೆಳಿಗ್ಗೆ 10.30ರ ಸುಮಾರಿಗೆ ಆಸ್ಪತ್ರೆಗೆ ದಾಖಲಾಗಿದ್ದಳು. ರಾತ್ರಿ 8.29ಕ್ಕೆ ಹೆರಿಗೆಯಾಗಿದೆ. ಆದ್ರೆ ರಕ್ತಸ್ರಾವ ನಿಲ್ಲಲಿಲ್ಲ. ಈ ಬಗ್ಗೆ ಸೂಕ್ತ ಚಿಕಿತ್ಸೆ ನೀಡುವ ಬದಲು ಹೆರಿಗೆ ತಜ್ಞರ ಅನುಪಸ್ಥಿತಿಯಲ್ಲಿ ವೈದ್ಯರೊಬ್ಬರು ಯಡವಟ್ಟು ಮಾಡಿದ್ದಾರೆ. ಇದ್ರಿಂದಾಗಿ ರಕ್ತಸ್ರಾವ ಹೆಚ್ಚಾಗಿದೆ.

ಹೆರಿಗೆ ವೇಳೆ ಮೂತ್ರಪಿಂಡ ಹೊರಗೆ ಬಂದಿತ್ತಂತೆ. ಇದ್ರಿಂದಾಗಿ ಅಲ್ಲಿಟ್ಟಿದ್ದ ಬಕೆಟ್ ತುಂಬುವಷ್ಟು ರಕ್ತಸ್ರಾವವಾಗಿದೆ. ಹೆರಿಗೆ ವೇಳೆ 9 ಗ್ರಾಂ ಇದ್ದ ರಕ್ತ 2 ಗ್ರಾಂಗೆ ಇಳಿದಿದೆ. ರಾತ್ರಿ 11 ಗಂಟೆ ಸುಮಾರಿಗೆ ಈ ವಿಷ್ಯವನ್ನು ವೈದ್ಯರು ಕುಟುಂಬಸ್ಥರಿಗೆ ಹೇಳಿದ್ದಾರೆ. ಬಕೆಟ್ ತುಂಬಿದ್ದ ರಕ್ತ ನೋಡಿ ಲವ್ದೀಪ್ ತಾಯಿ ಪ್ರಜ್ಞೆ ತಪ್ಪಿದ್ದರಂತೆ.

ಲವ್ದೀಪ್ ತಕ್ಷಣ ಪತ್ನಿಯನ್ನು ಅಮೃತಸರದಲ್ಲಿರುವ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು ಚಿಕಿತ್ಸೆ ನಡೆಸಿ ಮಹಿಳೆ ಜೀವ ಉಳಿಸಿದ್ದಾರೆ. ಸಿವಿಲ್ ಆಸ್ಪತ್ರೆಯಲ್ಲಿ ಹೆರಿಗೆ ತಜ್ಞರಿಲ್ಲದಿರುವುದೇ ಈ ಯಡವಟ್ಟಿಗೆ ಕಾರಣ ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...