alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಮಾನ್ಯರ ಸೇವೆಗೆ ಸಿದ್ಧವಾಗಿದೆ ರೈಲ್ವೆ ಸಲೂನ್

ಇಲ್ಲಿಯವರೆಗೆ ರೈಲ್ವೆಯ ವಿಶೇಷ ಸಲೂನ್ ಕೋಚ್ ನಲ್ಲಿ ರಾಷ್ಟ್ರಪತಿ, ರೈಲ್ವೆ ಸಚಿವರು, ರೈಲ್ವೆ ರಾಜ್ಯ ಸಚಿವರಿಗೆ ಮಾತ್ರ ಅವಕಾಶವಿತ್ತು. ಆದ್ರೀಗ ಸಾಮಾನ್ಯ ಜನರೂ ಇದನ್ನು ಬಳಸಬಹುದಾಗಿದೆ. ರೈಲ್ವೆ ಇಲಾಖೆ ತನ್ನ ನಿಯಮದಲ್ಲಿ ಬದಲಾವಣೆ ಮಾಡಿ ಸಾಮಾನ್ಯ ಪ್ರಯಾಣಿಕರಿಗೂ ಈ ಸಲೂನ್ ನಲ್ಲಿ ಪ್ರಯಾಣಿಸಲು ಅವಕಾಶ ನೀಡಿದೆ.

ಆರಂಭದಲ್ಲಿ ಮೊದಲ 6 ಗ್ರಾಹಕರು ಸೆಲೂನ್ ಕೋಚ್ ಮೂಲಕ ದೆಹಲಿಯಿಂದ ಜಮ್ಮುವಿಗೆ ಪ್ರಯಾಣ ಬೆಳೆಸಿದ್ದಾರೆ. ರೈಲ್ವೆ ಸಲೂನ್ ಡ್ರಾಯಿಂಗ್ ರೂಮ್, ಅಡುಗೆ ಮನೆ ಹಾಗೂ 2 ಬೆಡ್ ರೂಮ್ ಹೊಂದಿದೆ. ಪ್ರತಿ ಬೆಡ್ ರೂಮ್ ಗೆ ಶೌಚಾಲಯವಿದೆ. ಈ ಸೆಲೂನ್ ಚಲಿಸುವ ಮನೆಯಂತೆ ಇದೆ.

ಒಟ್ಟಾರಿ 336 ಸಲೂನ್ ಇದ್ದು, ಇವುಗಳಲ್ಲಿ 62 ಎಸಿ ಹೊಂದಿದೆ. ಬ್ರಿಟಿಷ್ ಕಾಲದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. ಇದು ಪ್ರಯಾಣ ಬೆಳೆಸಿದ್ದು ಇದೇ ಮೊದಲಲ್ಲ. ಬ್ರಿಟಿಷ್ ಕಾಲದಲ್ಲಿ ಬಸ್ ವ್ಯವಸ್ಥೆ ಸರಿಯಾಗಿರಲಿಲ್ಲ. ಹಾಗಾಗಿ ರೈಲಿನಲ್ಲಿಯೇ ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಸ್ವಾತಂತ್ರ್ಯದ ನಂತ್ರ ಗಣ್ಯರು ಇದ್ರಲ್ಲಿ ಪ್ರಯಾಣ ಬೆಳೆಸುತ್ತಿದ್ದರು.

ರೈಲ್ವೆ ಇಲಾಖೆ 10 ಸಲೂನನ್ನು ಸಾಮಾನ್ಯರಿಗೆ ಮೀಸಲಿಟ್ಟಿದೆ. ಆನ್ಲೈನ್ ನಲ್ಲಿ ಗ್ರಾಹಕರು ಇದನ್ನು ಬುಕ್ ಮಾಡಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...