alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲ್ವೆಯಲ್ಲಿ ಸಿಗುವ ಟೀ, ನೀರು, ಆಹಾರದ ಬೆಲೆ ಎಷ್ಟು ಗೊತ್ತಾ?

ರೈಲ್ವೆ ಇಲಾಖೆ ರೈಲಿನಲ್ಲಿ ನೀಡುವ ಆಹಾರದಲ್ಲಿ ಕೆಲವೊಂದು ಬದಲಾವಣೆ ಮಾಡಿದೆ. ರಾಜಧಾನಿ ಹಾಗೂ ಶತಾಬ್ಧಿ ರೈಲಿನಲ್ಲಿ ನೀಡಲಾಗುವ ಆಹಾರ ಮೆನ್ಯುವಿನ ಪರೀಕ್ಷೆ ನಡೆಯುತ್ತಿದೆ. ರೈಲ್ವೆ ಇಲಾಖೆ, Railway at a glance ನಲ್ಲಿ ರೈಲಿನಲ್ಲಿ ನೀಡುವ ಆಹಾರದ ಬೆಲೆಗಳನ್ನು ತಿಳಿಸಿದೆ.

ರೈಲ್ವೆ ಇಲಾಖೆ ಯಾವ ಯಾವ ಆಹಾರಕ್ಕೆ ಎಷ್ಟು ಬೆಲೆ ಎಂಬುದನ್ನು Railway at a glance ನಲ್ಲಿ ತಿಳಿಸಿದೆ. ಒಂದು ವೇಳೆ ಇದಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದ್ರೆ ನೀವು ದೂರು ನೀಡಬಹುದಾಗಿದೆ. ಆಹಾರದ ಬಿಲ್ ಕೂಡ ನೀವು ಪಡೆಯಬಹುದಾಗಿದೆ. ಆಹಾರಕ್ಕೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ 1800111321 ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ ದೂರು ನೀಡಬಹುದಾಗಿದೆ. ಇದಲ್ಲದೆ IRCTC ವೆಬ್ಸೈಟ್ wwe.irctc.com ನಲ್ಲೂ ನೀವು ದೂರು ನೀಡಬಹುದಾಗಿದೆ.

ರೈಲ್ವೆ ಇಲಾಖೆ ಆಹಾರಕ್ಕೆ ಎರಡು ರೀತಿಯಲ್ಲಿ ಶುಲ್ಕ ವಿಧಿಸುತ್ತದೆ. ರೈಲಿನಲ್ಲಿಯೇ ಆಹಾರ ಆರ್ಡರ್ ಮಾಡಿದ್ರೆ ಹೆಚ್ಚು ಹಣ ನೀಡಬೇಕಾಗುತ್ತದೆ. ಸ್ಟೇಷನ್ ನಲ್ಲಿ ಬೆಲೆ ಸ್ವಲ್ಪ ಕಡಿಮೆಯಿರುತ್ತದೆ. ಸ್ಟೇಷನ್ ನಲ್ಲಿ ಉಪಹಾರ ಖರೀದಿ ಮಾಡಿದ್ರೆ ಅದ್ರ ಬೆಲೆ 25 ರೂಪಾಯಿ. ಚಲಿಸುತ್ತಿರುವ ಟ್ರೈನ್ ನಲ್ಲಿ ಆರ್ಡರ್ ಮಾಡಿದ್ರೆ 30 ರೂಪಾಯಿ ನೀಡಬೇಕಾಗುತ್ತದೆ.

ಮೊಟ್ಟೆ ಆರ್ಡರ್ ಮಾಡುವವರಿಗೆ ಎರಡು ಮೊಟ್ಟೆಯ ಆಮ್ಲೆಟ್ ಸಿಗಲಿದೆ. ಚಲಿಸುವ ರೈಲಿನಲ್ಲಿ ಇದ್ರ ಬೆಲೆ 35 ರೂಪಾಯಿಯಾದ್ರೆ, ಸ್ಟೇಷನ್ ನಲ್ಲಿ 30 ರೂಪಾಯಿಗೆ ಲಭ್ಯವಾಗಲಿದೆ. ರೈಲ್ವೆಯಲ್ಲಿ ಟೀಗೆ 5 ರೂಪಾಯಿ, ಕಾಫಿಗೆ  7 ರೂಪಾಯಿ ನೀಡಬೇಕು. 285 ಎಂ.ಎಲ್. ಟೀ 10 ರೂಪಾಯಿಗೆ ಸಿಗಲಿದೆ. ಒಂದು ಲೀಟರ್ ನೀರಿನ ಬೆಲೆ 15 ರೂಪಾಯಿ. ಚಲಿಸುತ್ತಿರುವ ಟ್ರೈನ್ ನಲ್ಲಿ ಊಟಕ್ಕೆ 50 ರೂಪಾಯಿಯಾದ್ರೆ ಸ್ಟೇಷನ್ ನಲ್ಲಿ 45 ರೂಪಾಯಿ ನೀಡಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...