alex Certify
ಕನ್ನಡ ದುನಿಯಾ       Mobile App
       

Kannada Duniya

ದಾವೂದ್ ನ ದೊಡ್ಡ ಸತ್ಯ ಬಾಯ್ಬಿಟ್ಟ ಸಹೋದರ ಇಕ್ಬಾಲ್

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ ಮಹತ್ವದ ವಿಷಯಗಳನ್ನು ಪೊಲೀಸ್ ಮುಂದೆ ಬಾಯ್ಬಿಟ್ಟಿದ್ದಾನೆ. ಥಾಣೆ ಪೊಲೀಸ್ ವಿಚಾರಣೆ ವೇಳೆ ದಾವೂದ್ ನೆಲೆ ನಿಂತಿರುವ ಸ್ಥಳದ ಬಗ್ಗೆ ಮಾಹಿತಿ ನೀಡಿದ್ದಾನೆ.

ಮೂಲಗಳ ಪ್ರಕಾರ ದಾವೂದ್ ಪಾಕಿಸ್ತಾನದ ಕರಾಚಿಯಲ್ಲಿದ್ದಾನೆಂದು ಕಸ್ಕರ್ ಹೇಳಿದ್ದಾನೆ ಎನ್ನಲಾಗಿದೆ. ತನ್ನ ಗ್ಯಾಂಗ್ ನ ಇತರ ಸದಸ್ಯರ ಜೊತೆ ಕರಾಚಿಯಲ್ಲಿ 4 ಐಷಾರಾಮಿ ಬಂಗಲೆಯಲ್ಲಿದ್ದಾನಂತೆ. 2003ರ ನಂತ್ರ ದಾವೂದ್ ನನ್ನು ನಾನು ಸಂಪರ್ಕ ಮಾಡಿಲ್ಲ ಎಂದು ಕಸ್ಕರ್ ಪದೇ ಪದೇ ಹೇಳಿದ್ದಾನೆ ಎನ್ನಲಾಗಿದೆ. ಮಾಧ್ಯಮಗಳ ಮೂಲದಿಂದ ಆತ ಕರಾಚಿಯಲ್ಲಿರುವುದು ತಿಳಿದು ಬಂದಿದೆ ಎಂದು ಕಸ್ಕರ್ ಹೇಳಿದ್ದಾನೆ.

ಕಸ್ಕರ್ ದಾವೂದ್ ನ ನಾಲ್ಕು ಬಂಗಲೆಯ ವಿವರವನ್ನೂ ನೀಡಿದ್ದಾನೆ. ಈ ನಾಲ್ಕು ಬಂಗಲೆಯಲ್ಲಿ ದಾವೂದ್ ಜೊತೆ ಆತನ ಕುಟುಂಬದವರು ವಾಸವಾಗಿದ್ದಾರಂತೆ. ಇಕ್ಬಾಲ್ ನನ್ನು ಇಂಟಲಿಜೆನ್ಸ್ ಬ್ಯೂರೋ ಅಧಿಕಾರಿಗಳು ಕೂಡ ವಿಚಾರಣೆಗೊಳಪಡಿಸಿದ್ದಾರೆ. ಇಬ್ಬರು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದರೆ ಕಡಿಮೆ ರಕ್ತದೊತ್ತಡದ ಹೆಸರು ಹೇಳಿ ಇಕ್ಬಾಲ್ ಪದೇ ಪದೇ ಶೌಚಾಲಯಕ್ಕೆ ಹೋಗುತ್ತಿದ್ದನಂತೆ.

ದಾವೂದ್ ಇಬ್ರಾಹಿಂ ಸಹೋದರ ಅನೀಸ್ ಇಬ್ರಾಹಿಂ ಸಂಪರ್ಕದಲ್ಲಿದ್ದಾನೆಂದು ಕಸ್ಕರ್ ಹೇಳಿದ್ದಾನೆ. ಅನೀಸ್ ಕೂಡ ಪಾಕಿಸ್ತಾನದ ಕರಾಚಿಯಲ್ಲಿದ್ದು, ಆತನಿಗೆ ಮೂರು ಮನೆಗಳಿವೆ. ತನಿಖೆ ವೇಳೆ 2003ರ ನಂತ್ರ 3 ಬಾರಿ ಮಾತ್ರ ಕಸ್ಕರ್ ನನ್ನು ದಾವೂದ್ ಸಂಪರ್ಕಿಸಿರುವುದು ಬಹಿರಂಗವಾಗಿದೆ. ಸಹೋದರಿ ಹಸೀನಾ ಪಾರ್ಕರ್ ಅನಾರೋಗ್ಯ ಹಾಗೂ ಸಾವಿನ ಬಗ್ಗೆ ಮಾತನಾಡಿದ್ದರು ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...