alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದಲ್ಲ ಎರಡಲ್ಲ 192 ದೇಶಗಳ ಪೊಲೀಸರಿಗೆ ಬೇಕಾಗಿದ್ದಾನೆ ನೀರವ್ ಮೋದಿ

ಹನ್ನೊಂದು ದೇಶಗಳು ಡಾನ್ ನನ್ನು ಹುಡುಕುತ್ತಿದ್ದವು. ಡಾನ್ ಹಿಡಿಯೋದು ಸುಲಭದ ಕೆಲಸವಾಗಿರಲಿಲ್ಲ. ಡಾನ್ ಕಾ ಪಕಡನಾ ಮುಷ್ಕಿಲ್ ಹೀ ನಹಿ ನಾ ಮುಂಮ್ಕಿನ್ ಹೇ ಎಂಬ ಡೈಲಾಗ್ ಆಗ ಎಲ್ಲೆಡೆ ಕೇಳಿ ಬರ್ತಿತ್ತು. ಆದ್ರೆ ಡಾನ್ ಗಿಂತ ಖತರ್ನಾಕ್ ನೀರವ್ ಮೋದಿ ಎಂಬುದು ಗೊತ್ತಾಗಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂಪಾಯಿ ವಂಚಿಸಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ವಜ್ರ ವ್ಯಾಪಾರಿ ನೀರವ್ ಮೋದಿ ಡಾನ್ ಗಿಂತ ದೊಡ್ಡವನಾಗಿದ್ದಾನೆ. ನೀರವ್ ಮೋದಿಯನ್ನು 11 ದೇಶಗಳಲ್ಲ 192 ದೇಶಗಳು ಹುಡುಕುತ್ತಿವೆ. ನೀರವ್ ಮೋದಿಗೆ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ನೀಡಲಾಗಿದೆ.

ಇಂಟರ್ನ್ಯಾಷನಲ್ ಕ್ರಿಮಿನಲ್ ಪೋಲಿಸ್ ಆರ್ಗನೈಸೇಶನ್ (ಇಂಟರ್ಪೋಲ್) ಸೋಮವಾರ ನೀರವ್ ಮೋದಿಗೆ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದೆ. ನೀರವ್ ಮೋದಿ ಜೊತೆಗೆ ಆತನ ಸಹೋದರ ನಿಶಾಲ್ ಮೋದಿ ಹಾಗೂ ಕಂಪನಿಯ ಕಾರ್ಯನಿರ್ವಾಹಕ ಸುಭಾಷ್ ಪರಬ್ 13578 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ.

ಫೆಬ್ರವರಿಯಲ್ಲಿ ನೀರವ್ ಮೋದಿ ವಿರುದ್ಧ ಎಫ್ ಐ ಆರ್ ದಾಖಲಾದ ನಂತ್ರ ಸಿಬಿಐ ಹಾಗೂ ಇಡಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಇಂಟರ್ಪೋಲ್ ಗೆ ಮನವಿ ಸಲ್ಲಿಸಿತ್ತು. ವಿಚಾರಣೆಗೆ ಹಾಜರಾಗುವಂತೆ ನಾಲ್ಕು ಬಾರಿ ಸಮನ್ಸ್ ನೀಡಲಾಗಿತ್ತು. ಆದ್ರೆ ಕೋರ್ಟ್ ಗೆ ಗೈರಾದ ಕಾರಣ ಈ ನೋಟಿಸ್ ಜಾರಿಯಾಗಿದೆ.

ರೆಡ್ ಕಾರ್ನರ್ ನೋಟಿಸ್ ಪ್ರಕಾರ ನೀರವ್ ಮೋದಿ ಯಾವ ದೇಶದಲ್ಲಿ ಬಚ್ಚಿಟ್ಟುಕೊಂಡ್ರು ಪೊಲೀಸ್ ಕೈಗೆ ಸಿಗಲೇಬೇಕು. 192 ದೇಶಗಳಲ್ಲಿ ಯಾವ ದೇಶದಲ್ಲಿ ನೀರವ್ ಮೋದಿ ಇದ್ರೂ ಆ ದೇಶದ ಪೊಲೀಸರು ಆತನನ್ನು ಬಂಧಿಸುತ್ತಾರೆ. ವಿದೇಶದಲ್ಲಿ ನೀರವ್ ಮೋದಿ ಬಂಧನದ ನಂತ್ರ ಭಾರತಕ್ಕೆ ಕರೆದುಕೊಂಡು ಬರುವ ಪ್ರಕ್ರಿಯೆ ಶುರುವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...