alex Certify
ಕನ್ನಡ ದುನಿಯಾ       Mobile App
       

Kannada Duniya

ದುಂಬಾಲು ಬಿದ್ದ ಯುವಕ, ದುಡುಕಿದ ವಿದ್ಯಾರ್ಥಿನಿ

ಹೈದರಾಬಾದ್: ಆಘಾತಕಾರಿ ಘಟನೆಯಲ್ಲಿ ಪ್ರೀತಿಸುವಂತೆ ಯುವಕ ಬಲವಂತ ಮಾಡಿ ಕಿರುಕುಳ ನೀಡಿದ್ದರಿಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಮಾಮಿಡಿಗುಡೂರು ಮಂಡಲದ ಗೋಗಣ್ಣಮಾಟಂ ಗ್ರಾಮದಲ್ಲಿ ಘಟನೆ ನಡೆದಿದೆ. ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅದೇ ಗ್ರಾಮದ ಯುವಕ ಪ್ರೀತಿಸುವಂತೆ ಬಲವಂತ ಮಾಡುತ್ತಿದ್ದ. ವರ್ಷದಿಂದ ಕಿರುಕುಳ ನೀಡುತ್ತಿದ್ದು, ವಿದ್ಯಾರ್ಥಿನಿ ಪೋಷಕರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರಿಗೂ ವಿಷಯ ತಿಳಿಸಲಾಗಿತ್ತು. ಪೊಲೀಸರು ಬುದ್ಧಿಮಾತು ಹೇಳಿ ಕಳುಹಿಸಿದ್ದರು.

ಆದರೆ, ಪೊಲೀಸರ ಎಚ್ಚರಿಕೆ ನಂತರವೂ ಆತ ವಿದ್ಯಾರ್ಥಿನಿಗೆ ಪ್ರೀತಿಸುವಂತೆ ಕಿರುಕುಳ ನೀಡಿದ್ದಾನೆ. ವಿದ್ಯಾರ್ಥಿನಿ ಕಾಲೇಜಿಗೆ ಹೋಗಿ ಬರುವ ಸಂದರ್ಭದಲ್ಲಿ ಹಿಂಬಾಲಿಸಿ ಕಿರುಕುಳ ನೀಡಿದ್ದು, ಇದರಿಂದ ಪೋಷಕರ ಗೌರವ ಹಾಳಾಗುತ್ತದೆ ಎಂದು ಭಾವಿಸಿದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾಗಿರುವ ಯುವಕನ ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಾಜ್ಯ ಸರ್ಕಾರ ಪತನಗೊಳಿಸುವ ಪ್ರಯತ್ನದ ಹಿಂದಿದೆಯಾ ಬಿಜೆಪಿ ನಾಯಕರ ಪಾತ್ರ...?

    View Results

    Loading ... Loading ...