alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಸ್ಪೋರ್ಟ್ ವಿಚಾರದಲ್ಲಿ ತಾನ್ವಿ ಮಾಡಿದ್ದಾಳೆ ‘ಬಿಗ್ ಮಿಸ್ಟೇಕ್’

ಕೆಲದಿನಗಳ ಹಿಂದೆ ಅನ್ಯ ಧರ್ಮೀಯ ದಂಪತಿಗೆ ಪಾಸ್ಪೋರ್ಟ್ ನಿರಾಕರಣೆ ವಿಚಾರ ಭಾರೀ ಸದ್ದು ಮಾಡಿತ್ತು. ಪಾಸ್ಪೋರ್ಟ್ ಪಡೆದುಕೊಳ್ಳೋದಕ್ಕೆ ಒಂದು ವರ್ಷದಿಂದ ಪ್ರಯತ್ನಿಸುತ್ತಿದ್ದರೂ ಪೊಲೀಸರಿಂದ ಸೂಕ್ತ ಸ್ಪಂದನೆ ಸಿಕ್ತಿಲ್ಲ ಅಂತ ಉತ್ತರ ಪ್ರದೇಶದ ತಾನ್ವಿ ಸೇಠ್ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಗಮನ ಸೆಳೆದಿದ್ದರು.

ಈ ಬಗ್ಗೆ ಟ್ವಿಟ್ಟರ್ ಮೂಲಕ ಸಚಿವರಿಗೆ ದೂರು ನೀಡಿದ್ದರು. ಆದ್ರೆ ಈ ಪ್ರಕರಣದಲ್ಲಿ ಈಗ ತಾನ್ವಿ ಸೇಠ್ ಬಿಗ್ ಮಿಸ್ಟೇಕ್ ಮಾಡಿದ್ದಾರೆ ಎಂದು ಪೊಲೀಸರು ಆರೋಪಿಸ್ತಿದ್ದಾರೆ. ಪಾಸ್ಪೋರ್ಟ್ ಅರ್ಜಿಯಲ್ಲಿ ತಾನ್ವಿ ಸೇಠ್ ತಪ್ಪು ಮಾಹಿತಿ ನೀಡಿದ್ದಾರೆ ಅಂತ ಪಾಸ್ಪೋರ್ಟ್ ಕಚೇರಿಯ ಅಧಿಕಾರಿಗಳು ಆರೋಪ ಮಾಡ್ತಿದ್ದಾರೆ.

ತಮ್ಮ ವಾಸಸ್ಥಳದ ಬಗ್ಗೆಯೇ ತಾನ್ವಿ ತಪ್ಪು ಮಾಹಿತಿಯನ್ನ ನೀಡಿದ್ದಾರಂತೆ. ಕಳೆದ ಒಂದು ವರ್ಷದಿಂದ ಲಕ್ನೋದಲ್ಲಿ ನೆಲೆಸಿರುವ ತಾನ್ವಿ ಸೇಠ್ ಅರ್ಜಿಯಲ್ಲಿ ಕೊಟ್ಟಿರುವ ವಿಳಾಸ ನೋಯ್ಡಾ ಮೂಲದ್ದು. ಬದಲಾಗಿರುವ ವಿಳಾಸಕ್ಕೆ ಸಂಬಂಧಿಸಿದಂತಾ ಪೂರಕ ದಾಖಲೆಗಳನ್ನ ತಾನ್ವಿ ನೀಡಿಲ್ಲವಂತೆ.

ಈ ಬಗ್ಗೆ ಪೊಲೀಸರು ಆರು- ಏಳು ಅಂಶಗಳ ವರದಿಯನ್ನ ಪಾಸ್ಪೋರ್ಟ್ ಅಧಿಕಾರಿಗಳಿಗೆ ರವಾನಿಸಿದ್ದಾರೆ. ತಪ್ಪು ಮಾಹಿತಿ ನೀಡಿರೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳೋಕೆ ಅವಕಾಶವಿದೆ. ಅದಕ್ಕೂ ಮುನ್ನ ಪಾಸ್ಪೋರ್ಟ್ ಅಧಿಕಾರಿಗಳ ಪ್ರತಿಕ್ರಿಯೆಗೆ ನಾವು ಕಾಯ್ತಿದ್ದೀವಿ ಅಂತಿದ್ದಾರೆ ಉತ್ತರ ಪ್ರದೇಶದ ಪೊಲೀಸರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...