alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವಾತಂತ್ರ್ಯ ದಿನಾಚರಣೆ ವೇಳೆ ದಾಳಿಗೆ ಉಗ್ರರ ಸಂಚು

ನವದೆಹಲಿ: ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ವೇಳೆ ರಾಷ್ಟ್ರ ರಾಜಧಾನಿ ಮೇಲೆ ದಾಳಿ ನಡೆಯುವ ಸಾಧ್ಯತೆಗಳಿವೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಸಂಬಂಧ ರಾಜಧಾನಿಯಾದ್ಯಂತ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಮಸೂದ್‌ ನೇತೃತ್ವದಲ್ಲಿ ದೆಹಲಿಯಲ್ಲಿ ದಾಳಿ ನಡೆಸಲು ಸಂಚು ರೂಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಸೂದ್‌, ಸಹೋದರ ಹಾಗೂ ಬಲಗೈ ಬಂಟ ಎನ್ನಲಾಗುತ್ತಿರುವ ಇಸ್ಮಾಯಿಲ್‌ ಅಲಿಯಾಸ್‌ ಮೊಹಮ್ಮದ್ ಇಬ್ರಾಹಿಂಗೆ ಈ ದಾಳಿಯ ಜವಾಬ್ದಾರಿ ವಹಿಸಿದ್ದಾನೆ. ಈಗಾಗಲೇ ರಾಜಧಾನಿಗೆ ಇಸ್ಮಾಯಿಲ್‌ ತಲುಪಿದ್ದಾನೆ ಎಂದು ಗುಪ್ತಚರ ಮೂಲಗಳು ಮಾಹಿತಿ ನೀಡಿವೆ ಎಂದು ತಿಳಿದು ಬಂದಿದೆ.

ಮೇ ತಿಂಗಳಲ್ಲಿ ಇಸ್ಮಾಯಿಲ್‌ ಜಮ್ಮುಗೆ ತಲುಪಿದ್ದಾನೆ. ಜೆಇಎಂ ಸಂಘಟನೆಯ ಕಾರ್ಯಕರ್ತರನ್ನು ಇಲ್ಲಿ ಸಂಪರ್ಕಿಸಿದ್ದಾನೆ. ಜೆಇಎಂ ಉಗ್ರನಾದ ಮೊಹಮ್ಮದ್ ಉಮರ್‌ ಸಹ ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರ ಭಾಗಕ್ಕೆ ನುಸುಳಿದ್ದಾನೆ. ಉಮರ್‌ ಹಾಗೂ ಇಬ್ರಾಹಿಂ ನೇತೃತ್ವದಲ್ಲಿ ರಾಜಧಾನಿ ಮೇಲೆ ದಾಳಿ ನಡೆಸಲು ಸಂಚು ರೂಪಿಸಲಾಗಿದೆ ಎಂದು ಮಾಹಿತಿ ಸಿಕ್ಕಿದೆ.

ಸಂಪೂರ್ಣ ದಾಳಿಗೆ ಅಸ್ಗರ್‌ ಯೋಜನೆ ರೂಪಿಸಿದ್ದಾನೆ ಎಂದು ಮಾಹಿತಿ ಇದೆ. 2016ರ ಪಠಾಣ್‌ ಕೋಟ್‌ನ ನಗ್ರೂಟ ಸೇನಾ ಶಿಬಿರದ ಮೇಲಿನ ದಾಳಿ ಹಾಗೂ 1999ರಲ್ಲಿ ನಡೆದ ವಿಮಾನ ಅಪಹರಣ ದಾಳಿಯ ರೂವಾರಿಯಾಗಿದ್ದ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಉಗ್ರರು ಗುರಿಯಾಗಿಸಿದ್ದಾರೆ ಎಂಬ ಮಾಹಿತಿಯೂ ಇದ್ದು, ಈ ಸಂಬಂಧ ಉತ್ತರ ಪ್ರದೇಶ, ದೆಹಲಿ ಸೇರಿ ವಿವಿಧ ವಲಯದಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ. ಉತ್ತರ ಪ್ರದೇಶದ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ಮಾಡುವ ಸಾಧ್ಯತೆಗಳೂ ಇದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

ಈ ಮಧ್ಯೆ ಪಾಕಿಸ್ತಾನದ ನುಸುಳುಕೋರರಿಗೆ ತಕ್ಕ ಉತ್ತರ ನೀಡುವುದಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಎಚ್ಚರಿಕೆ ನೀಡಿದ್ದಾರೆ. ನುಸುಳುಕೋರರ ಪ್ರತಿ ಬಾರಿಯ ಯತ್ನವನ್ನು ವಿಫಲಗೊಳಿಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...