alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಣು ಕುಕ್ಕುವಂತಿದೆ ಅಂಬಾನಿ ಮನೆಯ ಗಣೇಶೋತ್ಸವದ ವೈಭವ

ಮುಂಬೈ: ಗಣೇಶ ಉತ್ಸವ ಎಂದರೆ ಮುಂಬೈನಲ್ಲಿ ಎಲ್ಲಿಲ್ಲದ ಸಂಭ್ರಮ. ಜಿಯೋ ಮಾಲೀಕ ಹಾಗೂ ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ, ನೀತಾ ಅಂಬಾನಿ ಅವರ ಮನೆಯಲ್ಲಿ ನಡೆದ ಹಬ್ಬದ ಸಂಭ್ರಮ ಹೇಗಿತ್ತು ಎನ್ನುವ ಝಲಕ್ ಇಲ್ಲಿದೆ.

ಅಂಬಾನಿ ಅವರ ಅಂಟಿಲಿಯಾ ಮನೆಯಲ್ಲಿ‌ ಗಣೇಶ ಹಬ್ಬದ ಅಂಗವಾಗಿ ದೊಡ್ಡ ಮಂಟಪದಲ್ಲಿ ಇಡಲಾಗಿದ್ದ ಗಣೇಶನನ್ನು ವೈಭವದಿಂದ ಅಲಂಕರಿಸಲಾಗಿತ್ತು. ಕಿರೀಟ ಹಾಗೂ ವಿವಿಧ ಹೂಗಳಿಂದ ಅಲಂಕರಿಸಿದ್ದ ಗಣೇಶ ಮೂರ್ತಿಯೊಂದಿಗೆ, ಆಗಮಿಸಿದ್ದ ಅನೇಕ ವಿವಿಐಪಿಗಳು ಫೋಟೋ ಫೋಸ್ ನೀಡಿದರು. ಪ್ರತಿವರ್ಷದಂತೆ ಈ ಬಾರಿಯೂ ಮಹಾರಾಷ್ಟ್ರದ ಗಣ್ಯಾತಿಗಣ್ಯರು ಸೇರಿದಂತೆ ಅನೇಕ ವಿವಿಐಪಿಗಳು ಭಾಗವಹಿಸಿದ್ದರು.

ಅಂಬಾನಿ ಗಣೇಶ ಹಬ್ಬಕ್ಕೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, ಉದ್ದವ್ ಠಾಕ್ರೆ, ಸಂಜಯ್ ನಿರುಪಮ್ ಸೇರಿದಂತೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ದಂಪತಿ, ಜಹೀರ್ ಖಾನ್ ದಂಪತಿ ಹಾಗೂ ಹಾರ್ದಿಕ್ ಪಾಂಡ್ಯ, ಬಾಲಿವುಡ್ ತಾರೆಯರಾದ ಅಮಿತಾಬ್ ಬಚ್ಚನ್, ಶಾರುಕ್ ಖಾನ್, ಅಮೀರ್ ಖಾನ್, ಕರಣ್ ಜೋಹರ್, ಕತ್ರಿನಾ ಕೈಫ್ ಮೊದಲಾದವರು ಭಾಗವಹಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...