alex Certify
ಕನ್ನಡ ದುನಿಯಾ       Mobile App
       

Kannada Duniya

ಚೆನ್ನೈ ಜೈಲಿನ ಕೈದಿಗಳಿಗೆ ಸಿಕ್ಕಿರೋ ಸವಲತ್ತು ಕಂಡು ಹೌಹಾರಿದ ಅಧಿಕಾರಿಗಳು

ತಮಿಳುನಾಡಿನ ರಾಜಧಾನಿ ಚೆನ್ನೈನ ಸೆಂಟ್ರಲ್ ಜೈಲಿನ ಒಳಗಡೆಯ ನೋಟ ಕಂಡು ತಪಾಸಣೆಗೆಂದು ಬಂದ ಅಧಿಕಾರಿಗಳು ಹೌಹಾರಿದ್ದಾರೆ. ಕೈದಿಗಳಿಲ್ಲಿ ಸ್ಮಾರ್ಟ್‌ಫೋನ್ ಹಿಡಿದು ಓಡಾಡುತ್ತಾರೆ, ಮೆತ್ತನೆಯ ಹಾಸಿಗೆ ಮೇಲೆ ಮಲಗುತ್ತಾರೆ, ವಿವಿಧ ಎಲೆಕ್ಟ್ರಿಕಲ್ ಉಪಕರಣಗಳನ್ನು ಉಪಯೋಗಿಸುತ್ತಾರೆ, ಹೊರಗಡೆಯ ಆಹಾರವನ್ನು ಸೇವಿಸುತ್ತಾರೆ. ಆಹಾ, ಕೈದಿಗಳ ಭಾಗ್ಯಕ್ಕೆ ಎಣೆಯುಂಟೇ?

ಜೈಲಿನ ನಿಯಮಗಳ ಪ್ರಕಾರ, ಕೈದಿಗಳು ಕೇವಲ ಎರಡು ಬೆಡ್‌ಶೀಟ್‌ಗಳು ಹಾಗೂ ಎರಡು ಕುರ್ಚಿಗಳನ್ನಷ್ಟೇ ಬಳಸಬಹುದಾಗಿದೆ. ಕೋರ್ಟ್‌ನಿಂದ ಧಾರ್ಮಿಕ ಉಗ್ರವಾದದ ಸಂಬಂಧ ಶಿಕ್ಷೆಗೊಳಗಾದ ಕೈದಿಗಳ ಐಶಾರಾಮಿ ಜೀವನದ ಕುರಿತ ವಿಡಿಯೋ ಬಹಿರಂಗಗೊಳ್ಳುತ್ತಿದ್ದಂತೆ ಸರ್ಕಾರ ತನಿಖೆಗೆ ಆದೇಶಿಸಿದೆ.

ಜೈಲು ಅಧಿಕಾರಿಗಳು ಲಂಚ ಪಡೆದುಕೊಂಡು ಲಕ್ಷುರಿ ಸೌಲಭ್ಯಗಳನ್ನು ಕೈದಿಗಳಿಗೆ ಒದಗಿಸಿಕೊಟ್ಟರೇ ಎಂಬ ಕುರಿತು ತನಿಖೆ ನಡೆಯಲಿದೆ. ಜೈಲು ಆವರಣದೊಳಕ್ಕೆ ಈ ಐಶಾರಾಮಿ ವಸ್ತುಗಳು, ಉಪಕರಣಗಳನ್ನು ಕೊಂಡು ಹೋಗಿದ್ದು ಹೇಗೆ? ಜೈಲಿನ ಭದ್ರತಾ ವ್ಯವಸ್ಥೆ ಅಷ್ಟೊಂದು ದುರ್ಬಲವಾಗಿದೆಯೇ? ಎಂಬ ಸಂಶಯ ವ್ಯಕ್ತವಾಗಿದೆ. ಈ ಕುರಿತೂ ತನಿಖೆ ನಡೆಯಲಿದೆ. ಸದ್ಯಕ್ಕೆ7 ಮೊಬೈಲ್‌ಗಳು ಹಾಗೂ ಅನೇಕ ಎಲೆಕ್ಟ್ರಿಕಲ್ ಉಪಕರಣಗಳನ್ನು ಜೈಲಿನಿಂದ ಜಪ್ತಿ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...