alex Certify
ಕನ್ನಡ ದುನಿಯಾ       Mobile App
       

Kannada Duniya

ಈ ದೇವರಿಗೆ 100 ಕೋಟಿ ರೂ. ನಗದು ಅಲಂಕಾರ

ಭೋಪಾಲ್: ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿರುವ ಮಹಾಲಕ್ಷ್ಮಿ ದೇವಾಲಯದಲ್ಲಿ ಬರೋಬ್ಬರಿ 100 ಕೋಟಿ ರೂಪಾಯಿ ನಗದನ್ನು ಬಳಸಿ ಅಲಂಕಾರ ಮಾಡಲಾಗಿದೆ.

2000 ರೂ., 500 ರೂ., 200 ರೂ., 100 ರೂ., 50 ರೂ., 20 ರೂ., 10 ರೂ. ಹೀಗೆ ವಿವಿಧ ನೋಟ್ ಗಳನ್ನು ಬಳಸಿ ದೇವರು ಹಾಗೂ ಇಡೀ ದೇವಾಲಯವನ್ನು ಸಿಂಗರಿಸಲಾಗಿದೆ.

ನೋಟುಗಳಿಂದಲೇ ಅಲಂಕರಿಸಲಾದ ದೇವಾಲಯ ಮತ್ತು ದೇವರನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡತೊಡಗಿದ್ದಾರೆ.

100 ಕೋಟಿ ರೂ. ಮೌಲ್ಯದ ನೋಟುಗಳು ಮಾತ್ರವಲ್ಲದೇ, ಕೆ.ಜಿ.ಗಟ್ಟಲೇ ಚಿನ್ನಾಭರಣವನ್ನು ದೇವರಿಗೆ ಹಾಕಲಾಗಿದೆ. ಇಡೀ ದೇವಾಲಯ ನೋಟು, ಚಿನ್ನಾಭರಣಗಳಿಂದ ಕಂಗೊಳಿಸುತ್ತಿದೆ. ಕಳ್ಳರು ಕೈ ಚಳಕ ತೋರಿಸದಂತೆ ದೇವಾಲಯದ ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...