alex Certify
ಕನ್ನಡ ದುನಿಯಾ       Mobile App
       

Kannada Duniya

ಮಧ್ಯಾಹ್ನದೂಟದಲ್ಲಿ ಹುಳು ನೋಡಿ ಟೀಚರ್ ನೀಡಿದ್ರು ಈ ಸಲಹೆ…!

ಬಿಹಾರದ ಕಿಶನ್ಗಂಜ್ ನ ಕೆರಿಬಿಪುರ್ ಸೆಂಟ್ರಲ್ ಸ್ಕೂಲಿನಲ್ಲಿ ತಲೆ ತಗ್ಗಿಸುವ ಘಟನೆ ನಡೆದಿದೆ. ಮಕ್ಕಳಿಗೆ ನೀಡುವ ಮಧ್ಯಾಹ್ನದ ಊಟದಲ್ಲಿ ಹುಳು ಸಿಕ್ಕಿದೆ. ಇದನ್ನು ಮಕ್ಕಳು ಶಿಕ್ಷಕರಿಗೆ ತೋರಿಸಿದ್ದಾರೆ.

ವರದಿ ಪ್ರಕಾರ ಮಧ್ಯಾಹ್ನದೂಟದ ಕಿಚಡಿಯಲ್ಲಿ ಹುಳು ಸಿಕ್ಕಿದೆ. ಇದನ್ನು ಮಕ್ಕಳು ಶಿಕ್ಷಕರಿಗೆ ತೋರಿಸಿದ್ದಾರೆ. ಶಿಕ್ಷಕರು ಹುಳು ತೆಗೆದಿಟ್ಟು ಕಿಚಡಿ ತಿನ್ನಿ ಎಂದು ಸಲಹೆ ನೀಡಿದ್ದಾರೆ. ಅಡುಗೆ ತಯಾರಿಸುವವರು ಕೂಡ ಇದೇ ಉತ್ತರ ನೀಡಿದ್ದಾರೆ. ಪ್ರತಿ ದಿನ ಒಳ್ಳೆ ಕಿಚಡಿ ತಯಾರಿಸಲು ಸಾಧ್ಯವಿಲ್ಲ. ಬೇಕಾದ್ರೆ ತಿನ್ನಿ, ಇಲ್ಲವಾದ್ರೆ ಅಮ್ಮನಿಂದ ಮಾಡಿಸಿಕೊಂಡು ಬನ್ನಿ ಎಂದಿದ್ದಾರೆ.

ಇದ್ರಿಂದ ಕೋಪಗೊಂಡ ಮಕ್ಕಳು ಸುಮಾರು ಒಂದು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದಾರೆ. ಶಿಕ್ಷಕರು ಹಾಗೂ ಅಡುಗೆ ತಯಾರಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...