alex Certify
ಕನ್ನಡ ದುನಿಯಾ       Mobile App
       

Kannada Duniya

ನಾನು ಮತ್ತೆ ಮತ್ತೆ ಸಾಯುತ್ತಿದ್ದೇನೆಂದ ಸಂಸದ

Innocent5162

ಕೇರಳ ಮೂಲದ ನಟ ಹಾಗೂ ಸಂಸದ ಇನೊಸೆಂಟ್, ಸೋಷಿಯಲ್ ಮೀಡಿಯಾಗಳಲ್ಲಿ ಮತ್ತೆ ಮತ್ತೆ ಸುದ್ದಿಯಾಗುತ್ತಿದ್ದಾರೆ.

ಹಾಗಂತ ಇವರೇನು ಯಾವುದೋ ಗಮನಾರ್ಹ ಕೆಲಸ ಮಾಡಿಲ್ಲ. ಸೋಷಿಯಲ್ ಮೀಡಿಯಾಗಳು ಇವರನ್ನು ಪುನಃ ಪುನಃ ಸಾಯಿಸಿ ಹೆಸರು ಮಾಡುತ್ತಿವೆಯಷ್ಟೇ.

ಹೌದು, ನಟ ಹಾಗೂ ಸಂಸದ ಇನೊಸೆಂಟ್ ಅವರನ್ನು ಜಾಲತಾಣಗಳು ಮೂರು ತಿಂಗಳಲ್ಲಿ ಎರಡು ಬಾರಿ ಸಾಯಿಸಿವೆ. ಅದ್ಹೇಗೋ ಗೊತ್ತಿಲ್ಲ ವಾಟ್ಸಪ್ ಮತ್ತು ಪೇಸ್ ಬುಕ್ ಗಳಲ್ಲಿ ಇವರು ಸತ್ತುಹೋದರೆಂಬ ಸುದ್ದಿ ಆಗಾಗ ಹರಡುತ್ತಲೇ ಇರುತ್ತದೆ.

ಇವರ ಸತ್ತ ಸುದ್ದಿ ಕೇಳಿ ಅನೇಕ ಜನರು ಶ್ರದ್ದಾಂಜಲಿ ಕೂಡ ಸಲ್ಲಿಸಿದರಂತೆ. ಇದರಿಂದ ಬೇಸರಗೊಂಡಿರುವ ಇನೊಸೆಂಟ್, ಈ ಕುರಿತು ತನಿಖೆ ನಡೆಸುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...