alex Certify
ಕನ್ನಡ ದುನಿಯಾ       Mobile App
       

Kannada Duniya

ಗಾಯಗೊಂಡಿದ್ರೂ ಬರಿಗೈನಲ್ಲೇ ಮಾವೋಗಳ ವಿರುದ್ಧ ಹೋರಾಡಿದ ಯೋಧ

ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಮಾವೋವಾದಿಗಳ ದಾಳಿಯಲ್ಲಿ ಗಾಯಗೊಂಡಿದ್ದ ಯೋಧನೊಬ್ಬ ಬರಿಗೈನಲ್ಲೇ ಹೋರಾಟ ನಡೆಸಿದ್ದಾನೆ. ನಾಲ್ವರು ಮಾವೋಗಳನ್ನು ಹೊಡೆದೋಡಿಸಿದ್ದಾನೆ. ಈ ಸಾಹಸಿ ಯೋಧ 33 ವರ್ಷದ ಸಿ-60 ಕಮಾಂಡೋ, ಪೊಲೀಸ್ ನಾಯ್ಕ್ ಗೊಮ್ಜಿ ಮತ್ತಮಿ.

ಮಾವೋಗಳು ಗೊಮ್ಜಿ ಎದೆಗೆ ತಿವಿದಿದ್ದರು. ಎದೆಗೆ ಗಾಯವಾಗಿ ರಕ್ತ ಸೋರುತ್ತಿತ್ತು. ಆದ್ರೂ ಛಲಬಿಡದೇ ಗೊಮ್ಜಿ, ಮಾವೋಗಳ ಕೈಸೇರಿದ್ದ ತಮ್ಮ ರಿವಾಲ್ವರ್ ಅನ್ನು ಕಿತ್ತುಕೊಂಡಿದ್ದಾರೆ. ನಾಲ್ವರನ್ನೂ ಅಲ್ಲಿಂದ ಓಡಿಸಿದ್ದಾರೆ.

ಯೋಧನನ್ನು ಹತ್ಯೆ ಮಾಡಿ, ಆತನ ಬಳಿಯಿದ್ದ ಶಸ್ತ್ರಾಸ್ತ್ರ ತೆಗೆದುಕೊಂಡು ಹೋಗಲು ನಕ್ಸಲರು ಪ್ಲಾನ್ ಮಾಡಿದ್ದರು. ಮಾರುಕಟ್ಟೆಯಲ್ಲಿ ನಿಂತಿದ್ದ ಗೊಮ್ಜಿ ಮೇಲೆ ಹಿಂಬದಿಯಿಂದ ದಾಳಿ ಮಾಡಲಾಗಿತ್ತು. ನಾಲ್ವರು ಅವರ ಮೇಲೆ ಗನ್ ಗುರಿಯಿಟ್ಟಿದ್ರು.

ಆದ್ರೆ ಗೊಮ್ಜಿ ಕೂಡ ಧೃತಿಗೆಡಲಿಲ್ಲ, ರಿವಾಲ್ವರ್ ಮೇಲಿನ ಹಿಡಿತ ಬಿಡಲಿಲ್ಲ. ಆದ್ರೆ ಎದೆಗೆ ತಿವಿದಿದ್ದರಿಂದ ಗನ್ ಕೈತಪ್ಪಿತ್ತು. ಗಾಯಗೊಂಡಿದ್ರೂ ಬೆನ್ನಟ್ಟಿಕೊಂಡು ಹೋಗಿ ಮಾವೋಗಳನ್ನು ಓಡಿಸುವಲ್ಲಿ ಆತ ಸಫಲರಾಗಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೊಮ್ಜಿ, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...