alex Certify
ಕನ್ನಡ ದುನಿಯಾ       Mobile App
       

Kannada Duniya

ನಪುಂಸಕ ಎಂದ ಪತ್ನಿಗೆ ಇನ್ನೊಬ್ಬಳ ಜೊತೆಗಿದ್ದ ಪೋರ್ನ್ ವಿಡಿಯೋ ಕಳಿಸಿದ ಪತಿ..!

ಪತಿ ನಪುಂಸಕನೆಂಬ ಆರೋಪ ಹೊರಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಪತ್ನಿಗೆ ಪತಿ ವಿಚಿತ್ರವಾಗಿ ಉತ್ತರ ನೀಡಿದ್ದಾನೆ. ಇನ್ನೊಬ್ಬಳ ಜೊತೆ ಲೈಂಗಿಕ ಸಂಬಂಧ ಬೆಳೆಸಿದ ಪತಿ, ಅದ್ರ ವಿಡಿಯೋವನ್ನು ಪತ್ನಿ ಪಾಲಕರಿಗೆ ಕಳುಹಿಸಿದ್ದಾನೆ. ಆದ್ರೆ ಇದೂ ಆತನಿಗೆ ಯಡವಟ್ಟಾಗಿದೆ. ಪತ್ನಿ ಪಾಲಕರು ಪೊಲೀಸರಿಗೆ ದೂರು ನೀಡಿದ್ದರಿಂದ ಪತಿ ಜೈಲು ಸೇರಿದ್ದಾನೆ.

ಘಟನೆ ಹೈದ್ರಾಬಾದ್ ನಲ್ಲಿ ನಡೆದಿದೆ. 2016 ರಲ್ಲಿ ಮಹೇಶ್ ಹಾಗೂ ಕನ್ನಿಕಾ ( ಹೆಸರು ಬದಲಿಸಲಾಗಿದೆ) ಮದುವೆಯಾಗಿತ್ತು. ಇಬ್ಬರೂ 15 ದಿನಗಳ ಕಾಲ ಮಾತ್ರ ಒಟ್ಟಿಗಿದ್ದರು. ಎರಡೂ ಕುಟುಂಬದ ಸದಸ್ಯರು ದಂಪತಿ ಒಂದು ಮಾಡಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ ಕನ್ನಿಕಾ ಪತಿ ಮಹೇಶ್ ನಪುಂಸಕನೆಂದು ಆರೋಪ ಮಾಡಿದ್ದಳು.

ಈ ಸಂಗತಿ ಗೊತ್ತಾಗ್ತಿದ್ದಂತೆ ಕೋಪಗೊಂಡ ಮಹೇಶ್ ಪರಸ್ತ್ರೀ ಜೊತೆ ಸಂಬಂಧ ಬೆಳೆಸಿದ್ದಾನೆ. ಅದ್ರ ವಿಡಿಯೋ ಮಾಡಿ ಮಾವನಿಗೆ ಕಳುಹಿಸಿದ್ದಾನೆ. ವಿಡಿಯೋ ನೋಡಿದ ಮಾವ, ಚೆನ್ನೈ ಪೊಲೀಸರಿಗೆ ದೂರು ನೀಡಿದ್ದಾನೆ. ವಿಚಾರಣೆ ವೇಳೆ ಮಹೇಶ್ ಸತ್ಯ ಒಪ್ಪಿಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...