alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವ ದಾಖಲೆ ಮಾಡಿದ ಇಂದೋರ್ ಯುವತಿ

Indore woman breaks world record for longest drumming sessionಮಧ್ಯ ಪ್ರದೇಶದ ಇಂದೋರ್ ನ ಯುವತಿಯೊಬ್ಬಳು ವಿಶ್ವ ದಾಖಲೆ ಮಾಡಿದ್ದಾಳೆ. ಈ ಕಾರಣಕ್ಕಾಗಿ ಆಕೆ ಈಗ ಗಿನ್ನಿಸ್ ದಾಖಲೆಗೆ ಪಾತ್ರಳಾಗಿದ್ದಾಳೆ.

24 ವರ್ಷದ ಸೃಷ್ಟಿ ಪಟೇದಾರ್ ಈ ದಾಖಲೆ ಮಾಡಿದ ಯುವತಿಯಾಗಿದ್ದು, ಈಕೆ ನಿರಂತರವಾಗಿ 31 ಗಂಟೆಗಳ ಕಾಲ ಡ್ರಮ್ ಬಾರಿಸಿದ್ದಾಳೆ. ಈ ಮೂಲಕ ಮೆಕ್ಸಿಕೋದ ಸೋಫಿಯಾ ಹೊಂದಿದ್ದ ಸತತ 24 ಗಂಟೆಗಳ ಡ್ರಮ್ ಬಾರಿಸಿದ ದಾಖಲೆಯನ್ನು ಮುರಿದಿದ್ದಾಳೆ.

ರೈತ ವಿನೋದ್ ಪಟೇದಾರ್ ಎಂಬವರ ಪುತ್ರಿಯಾಗಿರುವ ಸೃಷ್ಟಿ, ಬಬ್ಲು ಶರ್ಮಾರ ಬಳಿ ಡ್ರಮ್ ಕಲಿಯುತ್ತಿದ್ದಳು. ದಾಖಲೆ ಮಾಡುವ ಸಲುವಾಗಿ ಕೆಲ ತಿಂಗಳಿನಿಂದ ಅಭ್ಯಾಸ ಕೈಗೊಂಡಿದ್ದ ಸೃಷ್ಟಿ, ಅಂತಿಮವಾಗಿ ವಿಶ್ವ ದಾಖಲೆಗೆ ಪಾತ್ರಳಾಗಿದ್ದಾಳೆ. ಸೋಮವಾರ ಮಧ್ಯಾಹ್ನ 12-30 ಕ್ಕೆ ಡ್ರಮ್ ಬಾರಿಸಲಾರಂಭಿಸಿದ ಸೃಷ್ಟಿ ಪಟೇದಾರ್, ಮಂಗಳವಾರ ರಾತ್ರಿ 8 ಗಂಟೆಗೆ ನಿಲ್ಲಿಸಿದ್ದಾರೆ. ಈ ಸುದೀರ್ಘ ಅವಧಿಯಲ್ಲಿ ಮೂರು ಬಾರಿ ಅಲ್ಪ ಕಾಲದ ವಿರಾಮವನ್ನು ಅವರು ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...