alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ಯಾನಕ್ಕೂ ಮುನ್ನ ತಾಯಿ ಕಾಲಿಗೆರಗಿದ ಪೈಲೆಟ್

ಇಂಡಿಗೋ ಪೈಲಟ್ ತನ್ನ ವೃತ್ತಿಯ ಮೊದಲ ದಿನ ಪ್ರಯಾಣದಲ್ಲೇ ತನ್ನ ತಾಯಿ ಹಾಗೂ ಅಜ್ಜಿಯನ್ನು ವಿಮಾನದಲ್ಲಿ ಕರೆದೊಯ್ದಿದ್ದಾರೆ. ಜತೆಗೆ ಪೈಲಟ್ ಸ್ಥಾನದಲ್ಲಿ ಕುಳಿತುಕೊಳ್ಳುವ ಮುನ್ನ ತಾಯಿ ಹಾಗೂ ಅಜ್ಜಿ ಆಶೀರ್ವಾದ ಪಡೆದುಕೊಂಡಿದ್ದಾರೆ.

ಇಂಡಿಗೋ ಪೈಲಟ್ ಪ್ರದೀಪ್ ಕೃಷ್ಣನ್ ಅವರು ಇಂಥದ್ದೊಂದು ಅಪರೂಪದ ಅವಕಾಶ ದಕ್ಕಿಸಿಕೊಂಡವರು. ಸಿಂಗಾಪುರ್ ಗೆ ತೆರಳುವ ತಮ್ಮ ಪ್ರಥಮ ಕಾರ್ಯ ನಿರ್ವಹಣೆಗೆ ಅವರು ತಮ್ಮ ತಾಯಿ, ಅಜ್ಜಿ, ಸಹೋದರಿಯನ್ನು ಕರೆತಂದಿದ್ದರು.

ವಿಮಾನ ಚಾಲನೆ ಮಾಡುವ ಮೊದಲು ಪ್ರಯಾಣಿಕರ ನಡುವೆ ಕುಳಿತಿದ್ದ ತಾಯಿ, ಅಜ್ಜಿಯತ್ತ ಆಗಮಿಸಿದ ಪ್ರದೀಪ್ ಕೃಷ್ಣನ್ ಅವರ ಕಾಲಿಗೆರಗಿ ಆಶೀರ್ವಾದ ಪಡೆದುಕೊಂಡರು. ಈ ಘಳಿಗೆಯನ್ನು ಆತನ ಸ್ನೇಹಿತ ನಾಗಾರ್ಜುನ ದ್ವಾರಕನಾಥ್ ವಿಡಿಯೋ ಮಾಡಿಕೊಂಡಿದ್ದು, ಫೇಸ್ ಬುಕ್ ಗೂ ಅಪ್ ಡೇಟ್ ಮಾಡಿದ್ದಾರೆ. ನಮ್ಮ ಕನಸು ನನಸಾಗಿದೆ. ನನ್ನ ರೂಂ ಮೇಟ್ ಪ್ರದೀಪ್ ಇಂಡಿಗೋದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆಂದು ಹೇಳಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...