alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಯಾಣಿಕನ ಲಗೇಜ್ ಮಿಸ್ ಮಾಡಿದ್ದ ಇಂಡಿಗೋ ಸಂಸ್ಥೆಗೆ ದಂಡ

indigoಹೈದರಾಬಾದ್ ನಿಂದ ದುಬೈಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರೊಬ್ಬರ ಲಗೇಜ್ ನ್ನು ಮಿಸ್ ಮಾಡುವ ಮೂಲಕ ಸೇವಾ ನ್ಯೂನ್ಯತೆಯೆಸಗಿದ ಇಂಡಿಗೋ ಸಂಸ್ಥೆಗೆ ಹೈದ್ರಾಬಾದ್ ನ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ, ಪ್ರಯಾಣಿಕನಿಗೆ 70 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ.

ಹೈದ್ರಾಬಾದ್ ನ ಲೋಯರ್ ಟ್ಯಾಂಕ್ ಬಂಡ್ ನಿವಾಸಿ ಶೇಕ್ ನೂರ್ ಮಹಮ್ಮದ್ ಜನವರಿ, 2014 ರಂದು ದುಬೈಗೆ ಪ್ರಯಾಣ ಬೆಳೆಸಿದ್ದು, ಅಲ್ಲಿಗೆ ಹೋದ ವೇಳೆ ಅವರ ಲಗೇಜ್ ಕಾಣೆಯಾಗಿತ್ತು. ಹೀಗಾಗಿ ಅವರು ಬಟ್ಟೆ ಮತ್ತಿತರೆ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಬೇಕಾಯಿತು. ಲಗೇಜ್ ನಲ್ಲಿ ಸುಮಾರು 1.18 ಲಕ್ಷ ರೂ. ಮೌಲ್ಯದ ವಸ್ತುಗಳಿದ್ದಾಗಿ ತಿಳಿಸಿದ್ದ ಅವರು, ಪರಿಹಾರ ಕೋರಿದ ವೇಳೆ ಇಂಡಿಗೋ ಸಂಸ್ಥೆ ಕೇವಲ 300 ಡಾಲರ್ ಗಳನ್ನು ನೀಡಲು ಮುಂದಾಗಿತ್ತು.

ಇದನ್ನು ತಿರಸ್ಕರಿಸಿದ ಶೇಕ್ ನೂರ್ ಮಹಮ್ಮದ್, ಹೈದ್ರಾಬಾದ್ ನ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆಯ ಮೊರೆ ಹೋಗಿದ್ದರು. ವಾದ- ವಿವಾದದ ವೇಳೆ ಪರಿಹಾರ ನೀಡಲು ನಿರಾಕರಿಸಿದ ಇಂಡಿಗೋ ಸಂಸ್ಥೆ, ತಮ್ಮ ಸಂಸ್ಥೆ ಹೈದ್ರಾಬಾದ್ ನಲ್ಲಿ ಬ್ರಾಂಚ್ ಹೊಂದಿಲ್ಲ. ಹೀಗಾಗಿ ಇದು ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆಯ ವ್ಯಾಪ್ತಿಗೆ ಬರುವುದಿಲ್ಲವೆಂದು ಹೇಳಿತ್ತು. ಜೊತೆಗೆ ಶೇಕ್ ನೂರ್ ಮಹಮ್ಮದ್ ದುಬೈನಲ್ಲಿ ತಾವು ಖರೀದಿಸಿದ್ದ ವಸ್ತುಗಳ ಬಿಲ್ ಹಾಜರುಪಡಿಸಲು ವಿಫಲರಾಗಿದ್ದಾರೆಂದು ವಾದಿಸಿತ್ತು. ಆದರೆ ಇದನ್ನು ತಳ್ಳಿ ಹಾಕಿರುವ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ, ಶೇಕ್ ನೂರ್ ಮಹಮ್ಮದ್ ಹೈದ್ರಾಬಾದ್ ನಲ್ಲಿ ವಿಮಾನದ ಟಿಕೇಟ್ ಬುಕ್ ಮಾಡಿಸಿದ್ದಾರಲ್ಲದೇ ಇಲ್ಲಿಂದಲೇ ಪ್ರಯಾಣಿಸಿದ್ದಾರೆ. ಅವರ ಲಗೇಜ್ ನ್ನು ಇಂಡಿಗೋ ಸಂಸ್ಥೆ ಪಡೆದ ಬಳಿಕ ಅದರ ಸಂಪೂರ್ಣ ಜವಾಬ್ದಾರಿ ಹೊಂದಿರುತ್ತದೆ. ಹೀಗಾಗಿ ಶೇಕ್ ನೂರ್ ಮಹಮ್ಮದ್ ಅವರಿಗಾದ ನಷ್ಟ ಹಾಗೂ ಮಾನಸಿಕ ಯಾತನೆಗೆ ಪರಿಹಾರವಾಗಿ 70 ಸಾವಿರ ರೂ. ಗಳನ್ನು ನೀಡುವಂತೆ ಆದೇಶಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...