alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಲಸ ಮಾಡುವ ಸಂಸ್ಥೆಗೆ ಬುದ್ದಿ ಕಲಿಸಲು ಹೋಗಿ ಜೈಲು ಪಾಲಾದ ನೌಕರ

ವ್ಯಕ್ತಿಯೊಬ್ಬ ತಾನು ಕೆಲಸ ಮಾಡುವ ಸಂಸ್ಥೆಗೆ ಬುದ್ದಿ ಕಲಿಸುವ ಸಲುವಾಗಿ ಖತರ್ನಾಕ್ ಕೆಲಸ ಮಾಡಿ ಇದೀಗ ಜೈಲು ಪಾಲಾಗಿದ್ದಾನೆ. ಸಂಸ್ಥೆಯ ಮುಖ್ಯಸ್ಥರು ಈ ನೌಕರನ ಕಾರ್ಯವೈಖರಿ ಕುರಿತು ಪದೇ ಪದೇ ಆಕ್ಷೇಪಿಸುತ್ತಿದ್ದುದಲ್ಲದೇ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದೇ ನೌಕರನ ಈ ಕೃತ್ಯಕ್ಕೆ ಕಾರಣವೆನ್ನಲಾಗಿದೆ.

ಇಂಡಿಗೋ ವಿಮಾನಯಾನ ಸಂಸ್ಥೆಯ ಉದ್ಯೋಗಿ ಪುಣೆ ಮೂಲದ 23 ವರ್ಷದ ಕಾರ್ತಿಕ್ ಮಾಧವ ಭಟ್ ಜೈಲು ಪಾಲಾದ ನೌಕರನಾಗಿದ್ದು, ದೆಹಲಿ ಕಛೇರಿಯಲ್ಲಿರುವ ಈತನ ಕಾರ್ಯ ನಿರ್ವಹಣೆಯ ಕುರಿತು ಮೇಲಾಧಿಕಾರಿಗಳು ಅಸಮಾಧಾನ ಹೊಂದಿದ್ದು, ಕಾರ್ಯ ವೈಖರಿ ಸುಧಾರಿಸಿಕೊಳ್ಳದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರೆನ್ನಲಾಗಿದೆ. ಇದರಿಂದಾಗಿ ಕಾರ್ತಿಕ್ ಮಾಧವ ಭಟ್ ಆಕ್ರೋಶಗೊಂಡಿದ್ದ.

ಇಂಡಿಗೋ ಸಂಸ್ಥೆಗೆ ಬುದ್ದಿ ಕಲಿಸಬೇಕೆಂದು ತೀರ್ಮಾನಿಸಿದ ಆತ ಮೇ 2 ರಂದು ದೆಹಲಿ ವಿಮಾನ ನಿಲ್ದಾಣಕ್ಕೆ ಕರೆ ಮಾಡಿ ಮುಂಬೈಗೆ ತೆರಳುತ್ತಿರುವ ಇಂಡಿಗೋ ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂದು ತಿಳಿಸಿದ್ದ. ಇದರಿಂದ ಆತಂಕಗೊಂಡ ವಿಮಾನ ನಿಲ್ದಾಣದ ಸಿಬ್ಬಂದಿ, ಮತ್ತೊಮ್ಮೆ ಸಂಪೂರ್ಣ ವಿಮಾನವನ್ನು ತಪಾಸಣೆ ಮಾಡಿದ್ದರಲ್ಲದೇ ಪ್ರಯಾಣಿಕರ ಲಗೇಜ್ ಪರಿಶೀಲನೆ ಕೂಡಾ ನಡೆಸಿದ್ದರು. ಬಳಿಕ ಯಾವುದೇ ಬಾಂಬ್ ಕಂಡು ಬಾರದ ಕಾರಣ ಹುಸಿ ಬಾಂಬ್ ಕರೆ ಎಂದು ಹೇಳಿ ವಿಮಾನ ಹಾರಾಟ ನಡೆಸಲು ಅನುಮತಿ ನೀಡಲಾಗಿತ್ತು. ಆದರೆ ತಪಾಸಣೆ ಕಾರಣಕ್ಕಾಗಿ ವಿಮಾನ ಕೆಲ ಗಂಟೆಗಳಷ್ಟು ತಡವಾಗಿ ಹಾರಾಟ ಆರಂಭಿಸಿತ್ತು.

ಹುಸಿ ಕರೆಯ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ ವೇಳೆ ಕಾರ್ತಿಕ್ ಮಾಧವ ಭಟ್ ಕರೆ ಮಾಡಿರುವುದು ಪತ್ತೆಯಾಗಿತ್ತು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದ ಆತ, ಇಂಡಿಗೋ ಸಂಸ್ಥೆಗೆ ಬುದ್ದಿ ಕಲಿಸಲು ಹೀಗೆ ಮಾಡಿದ್ದಾಗಿ ಹೇಳಿದ್ದ. ಇದೀಗ ಆತನ ವಿರುದ್ದ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...