alex Certify
ಕನ್ನಡ ದುನಿಯಾ       Mobile App
       

Kannada Duniya

ಇವು ದೇಶದ ಅತ್ಯಂತ ಸುಂದರ ರೈಲ್ವೆ ನಿಲ್ದಾಣಗಳು…!

ರೈಲ್ವೆ ನಿಲ್ದಾಣಗಳೆಂದ್ರೆ ಜನಜಂಗುಳಿ, ಗಲೀಜು ಅಂತಾನೆ ಬಿಂಬಿಸಲಾಗ್ತಿದೆ. ಆದ್ರೆ ಭಾರತದಲ್ಲೂ ಅತಿ ಸುಂದರವಾದ ರೈಲ್ವೆ ನಿಲ್ದಾಣಗಳಿವೆ. ಹೌದು, ರೈಲ್ವೆ ಸಚಿವಾಲಯ ಭಾರತದಲ್ಲಿರುವ ಅತಿ ಸುಂದರವಾದ ರೈಲ್ವೇ ನಿಲ್ದಾಣಗಳ ಪಟ್ಟಿ ಬಿಡುಗಡೆ ಮಾಡಿದೆ.

ಮಹಾರಾಷ್ಟ್ರದ ಚಂದ್ರಾಪುರ್ ಮತ್ತು ಬಲ್ಲಾರ್ ಪುರ್ ಸ್ಟೇಷನ್ ಅತ್ಯಂತ ಸುಂದರ ನಿಲ್ದಾಣಗಳೆಂದು ಗುರುತಿಸಿದ್ದು, ಈ ಎರಡೂ ನಿಲ್ದಾಣಗಳಿಗೂ ಪ್ರಶಸ್ತಿ ನೀಡುವುದಾಗಿ ಸಚಿವಾಲಯ ತಿಳಿಸಿದೆ.

ಈ ಎರಡೂ ರೈಲ್ವೆ ನಿಲ್ದಾಣಗಳ ಸೌಂದರ್ಯ ಹೆಚ್ಚಿಸಿದ್ದು, ನಾಗಪುರದ ಚಿತ್ರಕಲಾ ಮಹಾವಿದ್ಯಾಲಯದ ಕಲಾವಿದರು. ಚಂದ್ರಾಪುರ್ ರೈಲ್ವೆ ನಿಲ್ದಾಣದ ಮೆಟ್ಟಿಲುಗಳ ಮೇಲೆ ಚಿತ್ರಿಸಲಾಗಿರುವ ಹುಲಿಯ ಚಿತ್ರ ಹಾಗೂ ಬಲ್ಲಾರ್ ಪುರ್ ರೈಲು ನಿಲ್ದಾಣದಲ್ಲಿನ ನವಿಲಿನ ಚಿತ್ರ ಪ್ರಯಾಣಿಕರಿಗೆ ಸೆಲ್ಫಿ ಪಾಯಿಂಟ್ ಆಗಿದೆ. ಇಲ್ಲಿಗೆ ಬರುವ ಯಾವುದೇ ಪ್ರಯಾಣಿಕರು ಸೆಲ್ಫಿ ಕ್ಲಿಕ್ಕಿಸಿಕೊಳ್ಳದೆ ತೆರಳುವುದೇ ಇಲ್ಲ. ಅಷ್ಟು ಸುಂದರವಾಗಿ ಇಲ್ಲಿ ಹುಲಿ, ನವಿಲಿನ ಚಿತ್ರಗಳು ರಾರಾಜಿಸುತ್ತಿವೆ. ಇನ್ನು ಈ ಸಂಬಂಧ ರೈಲ್ವೆ ಸಚಿವ ಪಿಯೂಶ್ ಗೋಯಲ್, ರೈಲ್ವೆ ಖಾತೆ ರಾಜ್ಯ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...