alex Certify
ಕನ್ನಡ ದುನಿಯಾ       Mobile App
       

Kannada Duniya

ವಿಂಟೇಜ್ ಕಾರು ಖರೀದಿಸುವವರಿಗೆ ‘ಗುಡ್ ನ್ಯೂಸ್’

ವಿಂಟೇಜ್, ಕ್ಲಾಸಿಕ್ ಕಾರುಗಳ ಕ್ರೇಜ್ ಪಾಶ್ಚಿಮಾತ್ಯ ದೇಶಗಳಲ್ಲಿರುವಂತೆ ಭಾರತದಲ್ಲೂ ಇದೆ. ಆದರೆ, ಇಂಥ ಕಾರುಗಳ ಹರಾಜು ನಮ್ಮಲ್ಲಿ ನಡೆದೇ ಇಲ್ಲ ಎಂದೇ ಹೇಳಬೇಕು. ಇದೇ ಮೊದಲ ಬಾರಿಗೆ ಮುಂಬೈನಲ್ಲಿ ನವೆಂಬರ್ 20-21 ರಂದು ಹರಾಜು ನಡೆಯುತ್ತಿದೆ.

ಸುಮಾರು 10 ಕಾರುಗಳ ಹರಾಜು ನಡೆಯಲಿದ್ದು, ಕಾರಿನ ಮೂಲ ಬೆಲೆಗಿಂತ ಭಾರೀ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ.

ಭಾರತದಲ್ಲಿ ಇಂಥ ಕಾರು ಕೊಳ್ಳಲು ಆಸಕ್ತರಾದವರು ಒಂದು ನೆಟ್ ವರ್ಕ್ ಮೂಲಕ ನೇರವಾಗಿ ಮಾಲೀಕರನ್ನು ಸಂಪರ್ಕಿಸಿ ವ್ಯಾಪಾರ ಮಾಡುತ್ತಾರೆ. ಆದರೆ ಇದೇ ಮೊದಲ ಬಾರಿಗೆ ಅಷ್ಟಗುರು ಎಂಬ ಸಂಸ್ಥೆ ಹರಾಜೊಂದನ್ನು ಹೋಸ್ಟ್ ಮಾಡುತ್ತಿದೆ.

ಆನ್ಲೈನ್ ಮೂಲಕ ನಡೆಯುವ ಬಿಡ್ಡಿಂಗ್ ನವೆಂಬರ್ 20 ರಂದು ಬೆಳಗ್ಗೆ 10ರಿಂದ ಆರಂಭವಾಗಿ ನವೆಂಬರ್ 21ರ ರಾತ್ರಿ 8.30ಕ್ಕೆ ಕೊನೆಗೊಳ್ಳಲಿದೆ. ಅಷ್ಟಗುರು ವೆಬ್ ನಲ್ಲಿ ಈ ಪ್ರಕ್ರಿಯೆ ನಡೆಯುವುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...