alex Certify
ಕನ್ನಡ ದುನಿಯಾ       Mobile App
       

Kannada Duniya

ಉದ್ಘಾಟನೆಗೊಂಡ ವಾರದೊಳಗೇ ಮುಚ್ಚಿದ ‘ಅಂಡರ್ ವಾಟರ್’ ರೆಸ್ಟೋರೆಂಟ್

underwater-700_1454649985

ದೇಶದ ಮೊದಲ ‘ಅಂಡರ್ ವಾಟರ್’ ರೆಸ್ಟೋರೆಂಟ್ ಎಂಬ ಖ್ಯಾತಿಗೆ ಒಳಗಾಗಿದ್ದ ಗುಜರಾತಿನ ಅಹ್ಮದಾಬಾದ್ ನ ‘ರಿಯಲ್ ಪೊಸಡನ್’ ರೆಸ್ಟೋರೆಂಟ್ ಉದ್ಘಾಟನೆಗೊಂಡ ಒಂದು ವಾರದೊಳಗೆ ಮುಚ್ಚಲ್ಪಟ್ಟಿದೆ.

50 ವರ್ಷದ ಭರತ್ ಭಟ್ ಎಂಬ ಮೆಕಾನಿಕಲ್ ಎಂಜಿನಿಯರ್ ಸುಮಾರು 2.5 ಕೋಟಿ ರೂ. ವೆಚ್ಚದಲ್ಲಿ ಈ ರೆಸ್ಟೋರೆಂಟ್ ಆರಂಭಿಸಿದ್ದು, ಅಹ್ಮದಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ನಿಂದ ಅಗತ್ಯ ಪರವಾನಿಗೆ ಪಡೆದುಕೊಂಡಿಲ್ಲವೆಂಬ ಕಾರಣ ನೀಡಿ ಅಧಿಕಾರಿಗಳು ಈಗ ಬೀಗ ಜಡಿದಿದ್ದಾರೆ.

3000 ಚದರಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಿದ್ದ ಈ ರೆಸ್ಟೋರೆಂಟ್ ಉದ್ಘಾಟನೆಗೊಂಡಿದ್ದ ವೇಳೆ ಗ್ರಾಹಕರು ಮುಗಿ ಬಿದ್ದಿದ್ದರು. ಸುತ್ತಲೂ ನೀರು ತುಂಬಿರುವ ನಡುವೆ ಗಾಜಿನ ಗೋಡೆಯೊಳಗೆ ಕುಳಿತು ಊಟೋಪಚಾರ ಸವಿಯುವ ಆಕರ್ಷಣೆ ಎಲ್ಲರನ್ನೂ ಸೆಳೆದಿತ್ತು. ಆದರೆ ಈಗ ಅಹ್ಮದಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಹಾಗೂ ಅಗ್ನಿಶಾಮಕ ದಳದವರು ರೆಸ್ಟೋರೆಂಟ್ ಆರಂಭಕ್ಕೂ ಮುನ್ನ ಸೂಕ್ತ ಪರವಾನಿಗೆ ಪಡೆದಿಲ್ಲವೆಂದು ಹೇಳಿದ್ದು, ಆರಂಭಗೊಂಡ ವಾರದೊಳಗೇ ಬಾಗಿಲು ಮುಚ್ಚುವಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...