alex Certify
ಕನ್ನಡ ದುನಿಯಾ       Mobile App
       

Kannada Duniya

ಟೊಮೆಟೋ ಮೇಲೆ ಬಿದ್ದು ಹೊರಳಾಡಿದ್ದಾರೆ ಜನ

la tomatina festivalಸ್ಪೇನ್ ನ ವೆಲೆನ್ಸಿಯಾ ಬಳಿಯ ಸಣ್ಣ ಪಟ್ಟಣ ಬುನಾಲ್ ನಲ್ಲಿ ಪ್ರತಿ ವರ್ಷ ನಡೆಯುವ ಮೂಲಕ ಜನಪ್ರಿಯಗೊಂಡಿದ್ದ La Tomatina ಉತ್ಸವ ಈಗ ಭಾರತಕ್ಕೂ ಕಾಲಿಟ್ಟಿದೆ. ಮೇಘಾಲಯದಲ್ಲಿ ಇದೇ ಮೊದಲ ಬಾರಿಗೆ ಈ ಉತ್ಸವವನ್ನು ಆಯೋಜಿಸಲಾಗಿದ್ದು, ನೂರಾರು ಜನ ಇದರಲ್ಲಿ ಪಾಲ್ಗೊಂಡಿದ್ದಾರೆ.

ಮೇಘಾಲಯದ ರಾಜಧಾನಿ ಶಿಲ್ಲಾಂಗ್ ನಲ್ಲಿ ಈ ಉತ್ಸವ ನಡೆದಿದ್ದು, ತೋಟಗಾರಿಕಾ ಇಲಾಖೆ, ಸ್ಥಳೀಯ ತರಕಾರಿ ಮಾರಾಟಗಾರರೂ ಇದಕ್ಕೆ ಸಾಥ್ ನೀಡಿದ್ದಾರೆ. ಕ್ವಿಂಟಾಲ್ ಗಟ್ಟಲೇ ಅನುಪಯುಕ್ತ ಟೊಮೆಟೋಗಳನ್ನು ಇದಕ್ಕೆ ಬಳಸಿಕೊಳ್ಳಲಾಗಿದೆ.

ಇದರಲ್ಲಿ ಪಾಲ್ಗೊಂಡಿದ್ದವರು ಟೊಮೆಟೋ ಹಣ್ಣುಗಳಿಂದ ಪರಸ್ಪರ ಹೊಡೆದುಕೊಂಡಿದ್ದಾರೆ. ಅವರ ಮೇಲೆ ಬಿದ್ದು ಉರುಳಾಡಿದ್ದಾರೆ. ಈ ಉತ್ಸವದ ಯಶಸ್ಸಿನಿಂದ ಉತ್ತೇಜನಗೊಂಡಿರುವ ಸಂಘ- ಸಂಸ್ಥೆಗಳು ಬರುವ ವರ್ಷದಿಂದ ಇನ್ನೂ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...