alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ವಾನಕ್ಕಾಗಿ ಪ್ರತ್ಯೇಕ ಪಾರ್ಕ್

ಹೈದರಾಬಾದ್ : ದೇಶದ ಅನೇಕ ಉದ್ಯಾನವನಗಳಲ್ಲಿ ಶ್ವಾನಗಳ ವಾಕಿಂಗ್ ಗೆ ಅನುಮತಿ ನೀಡದಿರುವುದರಿಂದ, ಹೈದರಾಬಾದ್ ನಗರಸಭೆ ವತಿಯಿಂದ ದೇಶದಲ್ಲಿಯೇ ಮೊದಲ ಬಾರಿಗೆ ಶ್ವಾನಗಳಿಗೆಂದೇ ಪ್ರತ್ಯೇಕ ಪಾರ್ಕ್ ಒಂದನ್ನು ಆರಂಭಿಸಿದೆ‌

ಈಗಾಗಲೇ ವಿದೇಶಗಳಲ್ಲಿ ‌ಶ್ವಾನಗಳಿಗೆಂದು ಪ್ರತ್ಯೇಕ ಪಾರ್ಕ್ ನಿರ್ಮಾಣ ಹಳೆ ವಿಚಾರ. ಆದರೆ ದೇಶದ ಮಟ್ಟಿಗೆ ಇದು ಪ್ರಥಮ ಶ್ವಾನ ಪಾರ್ಕ್ ಎನ್ನುವ‌ ಹೆಗ್ಗಳಿಕೆ ಗಳಿಸಿದ್ದು, ಇದರಲ್ಲಿ ಶ್ವಾನಗಳ ವಾಯುವಿಹಾರಕ್ಕೆಂದು ಪ್ರತ್ಯೇಕ ಟ್ರ್ಯಾಕ್, ಸ್ಲ್ಪಾಷ್ ಪೂಲ್, ಶೌಚಾಲಯ ಸೇರಿದಂತೆ‌ ಸಕಲ ಸೌಲಭ್ಯಗಳನ್ನು‌ ಒದಗಿಸಲಾಗಿದೆ. ಇದರೊಂದಿಗೆ ಶ್ವಾನಗಳಿಗೆ ನೀಡಬೇಕಾದ ಅಗತ್ಯ‌‌ ಚುಚ್ಚುಮದ್ದನ್ನು ಇಲ್ಲಿ‌ ಉಚಿತವಾಗಿ ನೀಡಲಾಗುವುದು ಎಂದು ಅಧಿಕಾರಿಗಳು‌ ತಿಳಿಸಿದ್ದಾರೆ.

ಕಸ ಸಂಸ್ಕರಣಾ ಘಟಕವಾಗಿದ್ದ ಸ್ಥಳದಲ್ಲಿ ಸುಸಜ್ಜಿತ ಉದ್ಯಾನವನವನ್ನು 1.3 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದ್ದು, ಇದಕ್ಕಾಗಿ ಒಂದು ಕೋಟಿ ಖರ್ಚಾಗಿದೆ ಎಂದು ಹೈದರಾಬಾದ್ ಮುನಿಸಿಪಲ್ ಜೋನಲ್ ಆಯುಕ್ತೆ ಹರಿಚಂದನಾ ಹೇಳಿದ್ದಾರೆ.

ಸ್ವತಃ ಶ್ವಾನ ಪ್ರಿಯೆಯಾಗಿರುವ ಅವರು, ಶ್ವಾನಗಳ‌ ವಾಕಿಂಗ್ ಗೆ ಸಾಮಾನ್ಯ ಉದ್ಯಾನವನದಲ್ಲಾಗುವ ತೊಂದರೆಯನ್ನು ಗಮನಿಸಿ, ಇದನ್ನು ನಿರ್ಮಿಸಲಾಗಿದೆ. ಮುಂದಿನ ದಿನದಲ್ಲಿ‌ ಹೈದರಾಬಾದ್ ನ‌‌ ಇನ್ನೊಂದು ಬದಿಯಲ್ಲಿ ಇದೇ ಮಾದರಿಯಲ್ಲಿ ಶ್ವಾನ ಪಾರ್ಕ್ ನಿರ್ಮಿಸಲಾಗುವುದು ಎಂದಿದ್ದಾರೆ‌.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...